ಮಹೇಶ್ ಗೌಡಗೆ ಧನ್ಯವಾದ ಹೇಳಿದ ಪ್ರಜಾಕಾರಣಿ ಉಪೇಂದ್ರ…!

Date:

ಕೆಪಿಜೆಪಿ ಬಿಟ್ಟು ಪ್ರಜಾಕೀಯ ಹೆಸರಲ್ಲೇ ಪಕ್ಷಕಟ್ಟಲು ಮುಂದಾಗಿರುವ ಉಪೇಂದ್ರ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡಗೆ ಧನ್ಯವಾದ ತಿಳಿಸಿದ್ದಾರೆ.‌ ಈ ಘಟನೆ ಈಗ ನಡೆದಿದ್ದೇ ಒಳ್ಳೇದಾಯ್ತು. ಮುಂದೆ ಆಗಿದ್ದರೆ ಕಷ್ಟ ಆಗ್ತಿತ್ತು ಅಂತ ಎಫ್ ಬಿ ಲೈವ್ ನಲ್ಲಿ ಉಪೇಂದ್ರ ಮನಬಿಚ್ಚಿ ಮಾತಾಡಿದ್ದಾರೆ.


ಉಪೇಂದ್ರ ಅವರು ಏನ್ ಹೇಳಿದ್ದಾರೆ ಅನ್ನೋ ಪೂರ್ಣಪಾಠ ಇಲ್ಲಿದೆ.
ಎಲ್ರಿಗೂ ನಮಸ್ಕಾರ, ನಿಮಗೆ ಈಗಾಗಲೇ ಗೊತ್ತಿದೆ. ಏನೇನ್ ಆಗಿದೆ ಅಂತ. ನಾವು ಒಂದು ಪ್ರಜಾಕೀಯ ಎಂಬ ಕಾನ್ಸೆಪ್ಟ್ ಇಟ್ಕೊಂಡು, ಕಂಪ್ಲೀಟ್ ರಾಜಕೀಯಕ್ಕಿಂತ ಸತ್ಯದ ಕಡೆಗೆ ಹೋಗಿ, ಅದ್ಭುತವಾದ ರಾಜ್ಯವನ್ನು , ಕನಸಿ ಕರ್ನಾಟಕವನ್ನು ಮಾಡ್ಬೇಕು. ಆ ಒಂದು ವಿಶ್ವಾಸ ಇಟ್ಕೊಂಡು , ಒಂದ್ ನಂಬಿಕೆ ಇಟ್ಕೊಂಡು ಹೊರಟ್ವಿ.
ನಂಬಿಕೆ ಅನ್ನೋ ಪ್ರಶ್ನೆ ಬಂದಾಗ, ನಂಬದೇ ಇದ್ರೆ ಈ ಕೆಲಸ ಮಾಡೋಕೆ ಆಗ್ತಿರ್ಲಿಲ್ಲ. ಸೋ ನಂಬ್ಕೊಂಡು ಹೊರಟ್ವಿ. ಆಮೇಲೆ ಏನೇನಾಗಿದೆ ಅಂತ ನಿಮಗೆ ಗೊತ್ತು.


ಮುಂಚೆಯಿಂದಲೂ ಹೇಳ್ತಿದೆ. ನಾವು ಯಾವ ರಾಜಕಾರಣಿಗಳಿಗೆ ಬೈಯೋದು ಬೇಡ,ನಮ್ಮ ಕೆಲಸ ನಾವು ಮಾಡಣ ಅಂತ.
ಇದು ನನಗೆ ಗೊತ್ತಿತ್ತು. ನಿಜವಾದ ರಾಜಕೀಯ, ಪ್ರಜಾಕೀಯ ಅನ್ನೋದು ಇರೋದು ಇಲ್ಲಿ (ಹೃದಯ,‌ಮನಸ್ಸು) .ಇದು ನನಗೆ ದೊಡ್ಡ ಪಾಠ ಆಯ್ತು. ಮಹೇಶ್ ಗೌಡ್ರಿಗೆ ಈ ಮೂಲಕ ಥ್ಯಾಂಕ್ಸ್ ಹೇಳ್ತೀನಿ. ಯಾಕಂದ್ರೆ ಆ ಮನುಷ್ಯ ಮಾಡಿದ್ರಿಂದ ಎಷ್ಟೋ ವಿಷಯಗಳು ಹೊರಗೆ ಬಂದ್ವು. ನಮ್ಮ ಜೊತೆ ಸೇರಿ ಈ ಕಾನ್ಸೆಪ್ಟ್ ಬಗಳ ಅದ್ಭುತ, ನಾವೆಲ್ಲಾ ಸೇರ್ತೀವಿ ಅಂತ ಕೆಲವರು.ಅದರಲ್ಲೂ ತುಂಬಾ ಜನ ಇಂಥಾ ಟೈಮಲ್ಲೂ ನಾವು ನಿಮ್ಮ ಜೊತೆ ಇರ್ತೀವಿ, ನಿಮಗೆ‌ ಸಪೋರ್ಟ್ ಮಾಡ್ತೀವಿ ಎಂದು ಜೊತೆಗಿದ್ದಾರೆ. ನಾವು ಹೊಸಪಕ್ಷ ಮಾಡಬೇಕು ಎಂದಾಗ ತುಂಬಾ ಜನ ಬಂದು ಜೊತೆಗಿದ್ದು ಮೆಂಬರ್ ಆಗಿದ್ದಾರೆ.

ಆಶ್ಚರ್ಯ ಅಂದ್ರೆ ಈ ಕಾನ್ಸೆಪ್ಟ್ ನಂಬಿಕೊಂಡು ಬಂದವರೇ ಬೇರೆತರ ಮಾಡ್ತಿದ್ದಾರೆ. ಏನು ಅಂತ ಗೊತ್ತಾಗ್ತಿಲ್ಲ.‌ಬಟ್ ದೇವ್ರು ಟೆಸ್ಟ್ ಗಳನ್ನು ಇಡ್ತಾನಂತೆ. ಹೇಳ್ತಾರಲ್ಲ? ಒಳ್ಳೇ ಕೆಲಸಕ್ಕೆ ನೂರೆಂಟ್ ವಿಘ್ನಗಳು ಅಂತ. ಧೃತಿ ಅಂತೂ ಗೆಡ್ತಿಲ್ಲ. ಖಂಡಿತಾ ನಾವು ಇನ್ನಷ್ಟು ಹುಷಾರಾಗಿ , ಎಷ್ಟು ಹುಷಾರಾಗ್ಬೇಕು ಗೊತ್ತಿಲ್ಲ. ಜನರ ಒಳಗಡೆಯನ್ನು ಹೆಂಗೆ ಟೆಸ್ಟ್ ಮಾಡ್ತೀರ ನೀವು? ಎಲ್ಲಾ ಮಾತಾಡ್ತಾರೆ, ಇದೇ ಕಾರಣಕ್ಕೆ ಬಂದಿದ್ದೀವಿ ಅಂತಾರೆ.


ಕೆವರಿಗೆ ಏನ್ ಅಂದ್ರೆ, ಬಹಳ ಕೆಲಸ ಮಾಡಿದ್ದೀವಿ ಎಂದು ಅವಮಾನದ ಫೀಲ್ ಆಗ್ತಿದೆ‌. ಒಳ್ಳೇ ಕೆಲಸ ಮಾಡಿದಾಗ ಅದರಲ್ಲೇನಿದೆ‌ . ಮುಖ ತೋರಿಸದೇ ಇರೋದು ಏನಿದೆ? ಸ್ವಾತಂತ್ರ್ಯ ಹೋರಾಟದಲ್ಲಿ ಎಷ್ಟು ಜ‌ನ ಸ್ಯಾಕ್ರಿಫೈಸ್ ಮಾಡಿದ್ದಾರೆ. ಅವ್ರು‌ ಯಾವತ್ತೂ ಅನ್ಕೊಂಡಿಲ್ಲ.‌ ಎಷ್ಟೋ ಹಿಂದೇಟುಗಳಾಗಿರಬಹುದು? ಅವಮಾನ ಆಯ್ತು ಅನ್ಕೊಂಡಿಲ್ಲ.‌


ನನಗೆ ಮತ್ತೆ ವಿಶ್ವಾಸ ಏಕಿದೆ ಅಂದ್ರೆ ಮ75-80% ಜನ ಜೊತೆಗೆ ನಿಂತು ಮತ್ತೆ ನಾವು ಮಾಡಣ. ಹತ್ತಲ್ಲ ಇಪ್ಪತ್ತು ವರ್ಷ ಕಾಯೋಕೆ ರೆಡಿ ಅಂತಿದ್ದಾರೆ. ಅದರಲ್ಲಿ ಕೆಲವರು ರಾಜಕೀಯ ಮೈಂಡ್ ಇರೋರು ಬಂದ್ ಸೇರ್ಕೊಂಡಿದ್ದಾರೆ. ಗೊತ್ತಿಲ್ಲ, ಸತ್ಯಕ್ಕೆ ಜಯ ಇದೆ ಎಂಬ ನಂಬಿಕೆ ಮೇಲೆ ಹೊರಟಿದ್ದೇವೆ.‌ ಬಟ್ ಒಂದಂಥೂ ಸತ್ಯ, ಈಗಲೇ ಆಗಿದ್ದಕ್ಕೆ ತುಂಬಾ ಖುಷಿ ಪಡ್ತೀನಿ. ಮುಂದೆ ಆಗಿದ್ದರೆ ತುಂಬಾ ಕಷ್ಟ ಆಗೋದು.

ಈ ಒಂದು ಘಟ‌ನೆಯಿಂದ ಇವ್ರಿಗೋಸ್ಕರ ಪಕ್ಷನೇ ಬಿಟ್ಟೆ. ಕೆಲವರಿಗೆ ನಾವಿನ್ನೂ ಎಲಕ್ಷನ್ ಗೆ ನಿಂತ್ಕೋ ಬೇಕು ಎಂಬ ಆಸೆ‌ ಇನ್ನೂ ಇದೆ. ಪ್ರಜಾಕೀಯ ಕಾನ್ಸೆಪ್ಟ್ ಪೋಸ್ಟ್ ಗಾಗಿ ಬಂದಿಲ್ಲ. ಕಾನ್ಸೆಪ್ಟ್ ಇಷ್ಟ ಆಗಿ ಬಂದಿರೋದು‌‌ .‌ಇಂಟರ್ವ್ಯೂವ್ ನಲ್ಲೂ ಕೇಳಿದ್ದೆ ನೀವು ಪೋಸ್ಟ್ ಗಾಗಿ ಬಂದಿದ್ದ, ಅಥವಾ ಕಾನ್ಸೆಪ್ಟ್ ಇಷ್ಟ ಆಗಿ ಬಂದಿದ್ದ ಅಂತ. ಪೋಸ್ಟ್ ಸಿಗದೇ ಇದ್ರೂ ಪರವಾಗಿಲ್ಲ ಕಾನ್ಸೆಪ್ಟ್ ಗಾಗಿ ಕೆಲಸ ಮಾಡ್ತೀವಿ ಎಂದವರಲ್ಲಿ ಕೆಲವರು ಇವತ್ತು ನಾವು ಎಲೆಕ್ಷನ್ ಗೆ ನಿಂತ್ಕೋತ್ತೀವಿ, ಅದು ಇದು ಅಂತಿದ್ದಾರೆ. ಸಂತೋಷ ಯಾರ್ ಬೇಕಾದ್ರು ನಿಂತ್ಕೋ ಬಹುದು. ಆದ್ರೆ,‌ನಾವು ಹೊರಟಿರೋ ದಾರಿ ಅಷ್ಟೊಂದು ಈಸಿ ಅನ್ಕೋಬೇಡಿ.‌ನಾಳೆನೇ ಎಲ್ಲವೂ ಚೇಂಜ್ ಆಗಲ್ಲ.‌ನಂಬಿಕೆ ಇರಲಿ. ನಮ್ ದಾರೀಲಿ ನಾವು ಹೋಗಣ.


ಸ್ವಾಮಿ ವಿವೇಕಾನಂದರು 100ಜ‌ನ ಯುವಕರು ಸಿಗಲಿ ನಾನು ದೇಶ ಕಟ್ಟುತ್ತೇನೆ ಅಂತ ಹೇಳಿದ್ರು.ವಿವೇಕಾನಂದರಿಗೆ 100ಜನ ಸಿಗೋದರಲ್ಲಿ ವಿಶೇಷ ಏನಿದೆ ಅಂತ ಯೋಚಿಸಿದ್ದೆ. ಆದರೆ, ಅವರು ಹೇಳಿದ್ರಲ್ಲಿ ಎಷ್ಟು ಸತ್ಯ ಇದೆ‌ ನೋಡಿ. ಒಳಗಡೆ ಪ್ಯೂರ್ ಆಗಿರೋರು ನನಗೀಗ ಬೇಕಾಗಿರೋದು 100-150 -200ಜನ ಬೇಕು ನನಗೆ. ಈ ಘಟನೆಯಿಂದ ಪ್ಯೂರಿಫೈ ಆಯ್ತು ಅನಿಸುತ್ತೆ.

ಕಾನ್ಸೆಪ್ಟ್ ನಂಬಿರೋರು ಮಾತ್ರ ಜೊತೆಗೆ ಸೇರುತ್ತಾರೆ ಅನ್ನೋ ನಂಬಿಕೆ ಇದೆ.‌ ಗೆಲ್ಲೋ ಟೈಮಲ್ಲಿ ತುಂಬಾ ಜನ ಬರ್ತಾರೆ. ಬಟ್ ಈ ಟೈಮಲ್ಲಿ ಜೊತೆಗಿರೋರೆ ನಿಜವಾದ ದೇವರುಗಳ ಸ್ವರೂಪ, ನಿಜವಾದ ಬೆಂಬಲ ಪ್ರಜಾಕೀಯಕ್ಕೆ‌ ಕೊಡುವಂತಹವರು ಈ ಸಮಯದಲ್ಲಿ ಕೊಡಬೇಕು. ಇಲ್ಲಿ (ಮನಸ್ಸಲ್ಲಿ) ಕರಪ್ಷನ್ ಇರೋದು. ಇದು ದೊಡ್ಡ ಪಾಠ ಆಯ್ತು ನನಗೆ. ಬಹಳಷ್ಟು ಹುಷಾರಾಗಿ ಮುಂದೆ ಹೆಜ್ಜೆ ಇಡೋಣ. ಇವತ್ತು ಆಗದೇ ಇದ್ದರೆ‌ ನಾಳೆ ಇನ್ನೊಬ್ಬ ಯುವಕ ಬಂದು ಇದನ್ನು ಮುನ್ನಡೆಸುತ್ತಾನೆ ಅನ್ಕೊಂಡಿದ್ದೀನಿ.
ಥ್ಯಾಂಕ್ಯು…ಎಂದಿದ್ದಾರೆ ಉಪ್ಪಿ

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...