ಬಾರ್ ಗೆ ಬಂದವ್ರಿಗೆ ಉಚಿತ ವಾಹನ ವ್ಯವಸ್ಥೆ…! ಹೀಗೂ ಉಂಟಾ? ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಂಡ್ರ? ಹೌದು ಹೀಗೂ ಉಂಟು…! ಇಂಥಾ ಸೌಲಭ್ಯ ನೀಡಿದವರು ಉಡುಪಿಯ ಅಜೆಕಾರಿನ ರಚನಾ ಬಾರಿನವರು…!?
ಹೆದ್ದಾರಿ ಪಕ್ಕದ ಬಾರ್ ಗಳನ್ನು ದೂರ ಸ್ಥಳಾಂತರಿಸಿದ್ದರಿಂದ ಗ್ರಾಹಕರ ಸಮಸ್ಯೆ ಎದುರಾಗಿದೆ. ಮಾಲೀಕರಿಗೀಗ ಗಿರಾಕಿಗಳದ್ದೇ ಸಮಸ್ಯೆ. ಈ ಸಮಸ್ಯೆಗೆ ರಚನಾ ಬಾರ್ ಮಾಲೀಕ ಕಂಡುಕೊಂಡ ಉಪಾಯವಿದು…!? ಈ ಉಪಾಯದಿಂದ ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.
ತಾನು ಗ್ರಾಹಕರ ಸೇವೆಗೆ ಉಚಿತ ಆಟೋ ವ್ಯವಸ್ಥೆಯ ಬೋರ್ಡ್ ರೆಡಿ ಮಾಡಿದ್ದೆ. ಈ ಬೋರ್ಡನ್ನು ಬಾರ್ ಪಕ್ಕದಲ್ಲಿ ಕಟ್ಟಿದ್ದೆ
ತಾನಿಲ್ಲದ ಸಂದರ್ಭದಲ್ಲಿ ಕೆಲವು ಹುಡುಗರು ಅದನ್ನು ಆಟೋ ರಿಕ್ಷಾಗೆ ಕಟ್ಟಿದ್ದಾರೆ ಎಂದು ಮಾಲೀಕ ನವೀನ್ ಹೇಳುತ್ತಿದ್ದಾರೆ. ಬ್ಯಾನರ್ ಕಟ್ಟಿದ ಆಟೋ ರಿಕ್ಷಾದ ಫೋಟೋ ಈಗ ವೈರಲ್ ಆಗಿದೆ.