ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿರೋದನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠ ಸ್ವಾಗತಿಸಿದೆ.
ಶ್ರೀಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತಾಡಿ, ‘ವೀರಶೈವ ಮತ್ತು ಲಿಂಗಾಯತ ಇಬ್ಬರನ್ನು ಸೇರಿಸಿ ಶಿಫಾರಸು ಮಾಡಿರೋದು ಸ್ವಾಗತಾರ್ಹ ಎಂದರು.
ಜೈನಧರ್ಮೀಯರು ಸಹ ಹಿಂದೂ ಧರ್ಮದ ಆಚರಣೆಗಳನ್ನು ಅನುಸರಿಸ್ತಾರೆ.ಲಿಂಗಾಯತ ಪ್ರತ್ಯೇಕ ಧರ್ಮವಾದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ಆಗಲ್ಲ. ಹಿಂದೂ ಧರ್ಮ ಆಳವಾಗಿ ಬೇರೂರಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ನಿರ್ಣಯವನ್ನು ಸ್ವಾಗತಿಸಬೇಕು. ಅಲ್ಪಸಂಖ್ಯಾತ ಸೌಲಭ್ಯಗಳು ದೊರಕಿದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವೆಂದರು.