ತ್ರಿಕೋನ ಸರಣಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್ ಹೀರೋ ಆಗಿದ್ದಾರೆ. ಅತ್ತ ಬಾಂಗ್ಲಾದಲ್ಲಿ ಬೌಲರ್ ರುಬೆಲ್ ಹುಸೇನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಫೈನಲ್ ಪಂದ್ಯದ ಸೋಲಿಗೆ ತಾನೇ ಕಾರಣ ಎಂದಿರುವ ರುಬೆಲ್ ಸೋಲಿನ ಸಂಪೂರ್ಣ ಹೊಣೆಯನ್ನು ಅವರೇ ಹೊತ್ತು ಟ್ವೀಟ್ ಮಾಡಿ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.
I know it's all my mistake but to be honest, I never thought Bangladesh would lose the game from such winning situation only for my mistake. I am seeking forgiveness to all my countrymen. Please forgive me. #NidahasTrophy
— Rubel Hossain (@rubel34official) March 18, 2018
ತಂಡ ಗೆಲುವಿಗೆ ಹತ್ತಿರದಲ್ಲಿತ್ತು. ಆದ್ರೆ, ನನ್ನ ತಪ್ಪಿನಿಂದ ಸೋಲು ಅನುಭವಿಸಬೇಕಾಯಿತು ಎಂದು ಕ್ಷಮೆಯಾಚಿಸಿದ್ದಾರೆ.
ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 29 ರನ್ ಗಳಿಸುವ ಮೂಲಕ ಸೋಲಿನಂಚಿನಲ್ಲಿದ್ದ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟರು. ಅದರಲ್ಲೂ ಕೊನೆಯ ಎಸೆತದಲ್ಲಿ 5ರನ್ ಬೇಕಿದ್ದಾಗ ಸಿಕ್ಸರ್ ಬಾರಿಸಿ ಭರ್ಜರಿ ಗೆಲುವು ತಂದುಕೊಟ್ಟಿದ್ದರು.