ನಿದಹಾಸ್ ತ್ರಿಕೋನ ಟಿ20ಸರಣಿ ಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಸೋಲಿನ ಅಂಚಿನಲ್ಲಿದ್ದ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ದಿನೇಶ್ ಕಾರ್ತಿಕ್ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿ ಬಿಟ್ಟಿದ್ದಾರೆ.
ಅತ್ಯುತ್ತಮ ಮ್ಯಾಚ್ ಫಿನಿಶರ್ ಎಂದು ಅಭಿಮಾನಿಗಳು ಕಾರ್ತಿಕ್ ಅವರನ್ನು ಕರೆಯುತ್ತಿದ್ದಾರೆ. 8 ಎಸೆತಗಳಲ್ಲಿ 29ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಕಾರ್ತಿಕ್. ನಾನು ಧೋನಿಗಿಂತ ಉತ್ತಮ ಫಿನಿಶರ್ ಅಲ್ಲ. ಧೋನಿ ಟಾಪರ್ ಆಗಿರುವ ವಿಶ್ವವಿದ್ಯಾಲಯದಲ್ಲಿ ನಾನಿನ್ನೂ ವಿದ್ಯಾರ್ಥಿ ಆಗಿದ್ದೇನೆ. ಧೋನಿ ಕ್ರಿಕೆಟ್ ಜರ್ನಿಯೇ ಬೇರೆ. ಧೋನಿ ಜತೆ ನನ್ನ ಹೋಲಿಕೆ ಸರಿಯಲ್ಲ ಎಂದಿದ್ದಾರೆ.