ಚಲಿಸುತ್ತಿದ್ದ ಬಸ್ ನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಜ್ಯ ಸಾರಿಗೆ ಬಸ್ ಕಂಡಕ್ಟರ್ ನನ್ನು ಬಂಧಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
50ವರ್ಷದ ಶ್ರೀನಿವಾಸ್ ಗುಪ್ತಾ ಬಂಧಿತ. ಈತ ವಿದ್ಯಾರ್ಥಿನಿ ಕಾಲೇಜಿಗೆ ಹೋಗುವಾಗ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು. ಇತರ ಮಹಿಳೆಯರ ಜೊತೆಯೂ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ವಿದ್ಯಾರ್ಥಿನಿ ತನಗಾದ ಕಿರುಕುಳದ ಬಗ್ಗೆ ಪೊಲೀಸರಿಗೆ ಮೆಸೇಜ್ ಮಾಡಿದ್ದಾಳೆ. ಶೀ ತಂಡ ( ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಚುಡಾಯಿಸೋದನ್ನು ತಡೆಗಟ್ಟಲು ರಚಿಸಿರುವ ತಂಡ ) ಬಸ್ ಕಂಡಕ್ಟರ್ ನನ್ನು ಪತ್ತೆ ಮಾಡಿದ್ದು, ಇದೀಗ ಕಾಮಿ ಕಂಡೆಕ್ಟರ್ ಪೊಲೀಸರ ಅತಿಥಿಯಾಗಿದ್ದಾನೆ.