ಏಪ್ರಿಲ್ ‘ಫೂಲ್’ ಬದಲು ಏಪ್ರಿಲ್ ‘ಕೂಲ್’ ಆಚರಿಸಿ, ಆಕರ್ಷಕ ಬಹುಮಾನ ಗೆಲ್ಲಿ….!

Date:

ನಾಳೆ ಎಲ್ಲರೂ ಬ್ಯುಸಿ….ಮೂರ್ಖರನ್ನಾಗಿ ಮಾಡುವಲ್ಲಿ, ಮೂರ್ಖರಾಗುವಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರ್ತಾರೆ, ಇರ್ತೀವಿ. ಆದ್ರೆ ನಾಳೆ ನಾವೆಲ್ಲಾ ಈ ‘ಏಪ್ರಿಲ್ ಫೂಲ್’ ಬದಲಿಗೆ ‘ಏಪ್ರಿಲ್ ಕೂಲ್’ ಆಚರಿಸಿದ್ರೆ ಹೇಗಿರುತ್ತೆ…?

ಆ ಬಗ್ಗೆ ಮಾತಾಡಣ…ಅದಕ್ಕೂ ಮೊದಲು ಸ್ವಲ್ಪ ಈ ಏಪ್ರಿಲ್ ಫೂಲ್ ಬಗ್ಗೆ ನೋಡ್ಕೊಂಡು ಬರೋಣ ಬನ್ನಿ.
ಈ ಮೂರ್ಖರ ದಿನವೆಂದು ಕರೆಯಲ್ಪಡೋ ಏಪ್ರಿಲ್ 1ಕ್ಕೆ ತನ್ನದೇಯಾದ ಚರಿತ್ರೆ ಇಲ್ಲ. ಇದರ ಪರಂಪರೆ ಬೆನ್ನಹತ್ತಿದಾಗ ಅದರ ಆರಂಭವನ್ನು‌ 1582 ರ ಫ್ರಾನ್ಸ್ ಇತಿಹಾಸದಿಂದ ನೋಡುತ್ತಾ ಬರ್ತೀವಿ. ಆದರೆ, ಅದರ ಚಿತ್ರಣವೂ ಸಹ ಅಸ್ಪಷ್ಟ.‌ ಅದು 1581ರ ಕಾಲಘಟ್ಟ. ಆಗ ಹೊಸ ವರ್ಷವನ್ನು ನಿರಂತರ ಎಂಟು ವರ್ಷಗಳ ಕಾಲ ಆಚರಿಸ್ತಿದ್ರು. ಏಪ್ರಿಲ್ 1 ಆ ಸಂಭ್ರಮದ ಕೊನೆಯ ದಿನವಾಗಿತ್ತು.

ಹಾಗಿರುವಾಗ ಇದ್ದಕ್ಕಿದ್ದ ಹಾಗೇ ಚಾರ್ಲ್ಸ್ ದೊರೆಗೆ ಏನನಿಸಿತೋ ಗೊತ್ತಿಲ್ಲ. ಆತ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಜಾರಿಗೊಳಿಸ್ತಾನೆ. ಆ ಬಳಿಕ ಜನವರಿ 1ಕ್ಕೆ ಹೊಸವರ್ಷಾಚರಣೆ ಆರಂಭವಾಗುತ್ತದೆ. ಮಾಧ್ಯಮಗಳ ಹಾವಳಿ ಇಲ್ಲದ ಆ ದಿನಗಳಲ್ಲಿ ಈ ಬೆಳವಣಿಗೆ ಅನೇಕರಿಗೆ ತಲುಪಲೇ ಇಲ್ಲ. ಇದು ತಿಳಿಯಲು ಅನೇಕ ವರ್ಷಗಳೇ ಬೇಕಾದವು. ತಲುಪಿದರೂ ಅದನ್ನು ಒಪ್ಪಿಕೊಳ್ಳದವರು ಏಪ್ರಿಲ್ 1ನ್ನೇ ಹೊಸವರ್ಷವೆಂದು ಆಚರಿಸುವುದನ್ನು ಮುಂದುವರೆಸಿದ್ರು. ಬದಲಾವಣೆ ಒಪ್ಪಿಕೊಂಡಿದ್ದ ಜನ ಈ ವರ್ಗವನ್ನು ಮೂರ್ಖರೆಂದು ಕರೆದು ಗೇಲಿ ಮಾಡಲಾರಂಭಿಸಿದರು. ಇದೇ ಬರುಬರುತ್ತಾ ಆಚರಣೆಯಾಗಿ ಬೆಳೆಯಿತು. ಮುಂದೆ ಇದು ವಿಶ್ವದಾದ್ಯಂತ ವ್ಯಾಪಿಸಿತು.


ಮೂರ್ಖರ ದಿನ ಹುಟ್ಟಿದ್ದು ಹೀಗೆ…ಏನೋ ಮಜಾ, ಖುಷಿ ಸಿಗುತ್ತೆ ಅಂತಾದ್ರೆ ಇದನ್ನು ಆಚರಿಸಿ…ಅದು ನಿಮ್ಮಿಷ್ಟ…ಆದರೆ ,‌ಫೂಲ್ ಮಾಡೋದಕ್ಕಿಂತ ಕೂಲ್ ಮಾಡೋ ಕಡೆ ಗಮನಹರಿಸಿದ್ರೆ ನಮ್ಗೂ ಒಳ್ಳೆಯದು ಅಂತ ಅನಿಸುತ್ತೆ…!
ಬಿಸಿಲ ಬೇಗ, ದಣಿವು, ಬಾಯರಿಕೆಯಿಂದ ತತ್ತರಿಸುತ್ತಿದ್ದೇವೆ. ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದು. ಅದಕ್ಕಾಗಿ ನಾವೊಂದು ಕೆಲಸ ಮಾಡೋಣ…


ನಮ್ಮ ಮನೆ, ಕಾಲೇಜು, ಆಫೀಸ್ ಹೀಗೆ ನಮ್ಮ ಪರಿಸರದ ಸುತ್ತ ಮುತ್ತ ಪ್ರಾಣಿ ಪಕ್ಷಿಗಳ ಬಾಯರಿಕೆ ನೀಗಿಸಲು ನೀರಿನ ವ್ಯವಸ್ಥೆ ಕಲ್ಪಿಸೋಣ..ಸಸಿಗಳನ್ನು ನೆಟ್ಟು ಫೋಷಿಸೋಣ.
ನೀವು ನಿಮ್ಮ ಸುತ್ತಮುತ್ತ ಪ್ರಾಣಿ ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ, ಆ್ರಶಯದ ವ್ಯವಸ್ಥೆ ಮಾಡಿ…ನಮಗೆ ಫೋಟೋ ಕಳುಹಿಸಿಕೊಡಿ….ಅವುಗಳನ್ನು ನಮ್ಮ ಪೇಜ್ ನಲ್ಲಿ ಹಾಕುತ್ತೇವೆ….ಅತೀ ಹೆಚ್ಚು ಲೈಕ್, ಕಾಮೆಂಟ್ ಹಾಗೂ ಶೇರ್ ಮಾಡಲ್ಪಟ್ಟ ಚಿತ್ರಕ್ಕೆ ಆಕರ್ಷಕ ಬಹುಮಾನ ಕಾದಿದೆ…
ವಾಟ್ಸಪ್ ನಂಬರ್ : 97427 09999

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...