ಮಾಲ್ ನಲ್ಲಿ ಬೆತ್ತಲಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದ ಮಾಡೆಲ್ ಹಾಗೂ ಫೋಟೋ ಶೂಟ್ ಮಾಡುತ್ತಿದ್ದ ಫೋಟೋಗ್ರಫರನ್ನು ಬಂಧಿಸಿರುವ ಘಟನೆ ಹ್ಯಾರಿಸ್ಬರ್ಗ್ ನಲ್ಲಿ ನಡೆದಿದೆ.

22ವರ್ಷದ ಮಾಡೆಲ್ ಚೆಲ್ಸಿಯಾ ಗುರ್ರಾ ಮತ್ತು ಫ್ಯಾಶನ್ ಛಾಯಾಗ್ರಾಹಕ 64ವರ್ಷದ ಮೈಕೆಲ್ ವಾರ್ನಾಕ್ ಬಂಧಿತರು.
ವಾರ್ನಾಕ್ ಪೆನ್ಸಿಲ್ವೇನಿಯಾದ ಮಾನ್ರೋವಿಲ್ಲೆನಲ್ಲಿ ಜನಸಂದಣಿ ಇದ್ದ ಮಿರಾಕಲ್ ಮೈಲ್ ಶಾಪಿಂಗ್ ಸೆಂಟರ್ ನಲ್ಲಿ ಫೋಟೋಶೂಟ್ ನಡೆಸುತ್ತಿದ್ದಾಗ ಸಾರ್ವಜನಿಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದಾಗ ಬೆತ್ತಲೆ ಫೋಟೋಶೂಟ್ ನಡೆಯುತ್ತಿತ್ತು. ಅದನ್ನು ಕಂಡ ಪೊಲೀಸರು ಮಾಡೆಲ್ ಮತ್ತು ಫೋಟೋಗ್ರಾಫರನ್ನು ಬಂಧಿಸಿದ್ದಾರೆ.



