ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ ವಿದ್ಯಾರ್ಥಿನಿಯೊಬ್ಬಳು ತಂದೆಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹರಿಯಾಣದ ಜಿಂದ್ ನಲ್ಲಿ ನಡೆದಿದೆ.
ಅಂಜಲಿ ಕುಮಾರಿ (17) ಮೃತೆ. 11ನೇ ತರಗಿ ಓದ್ತಿದ್ದ ಈಕೆ ಇಂದು ಬೆಳಗ್ಗೆ ತಂದೆ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗುತ್ತಿದ್ದಂತೆ ಬಾತ್ ರೂಂ ಗೆ ಹೋಗಿ ಲಾಕ್ ಮಾಡಿಕೊಂಡು ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡಿದ್ದಾಳೆಂದು ತಿಳಿದು ಬಂದಿದೆ.

ಕುಟುಂಬದವರು ನೀಡಿದ ಮಾಹಿತಿಯಿಂದ ಕೂಡಲೇ ಮನೆಗೆ ಬಂದ ತಂದೆ ಬಾತ್ ರೂಂ ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಅಂಜಲಿ ಮೃತಪಟ್ಟಿದ್ದಳು. ಭಾನುವಾರ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಅಂಜನಿ ಉತ್ತಮ ಅಂಕ ಕೂಡ ಪಡೆದಿದ್ದರು. ಕ್ಲಾಸ್ ಗೆ ಟಾಪ್ ಬರಲಿಲ್ಲ ಎಂದು ನೊಂದುಕೊಂಡಿದ್ದಳು ಎನ್ನಲಾಗಿದೆ. ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.




