ಅಪ್ರಾಪ್ತೆಯನ್ನು ಮದುವೆ ಮಾಡಿಕೊಡಲ್ಲ ಅಂದಿದ್ದಕ್ಕೆ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿರೋ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರಾಮ್ ಸಿಂಗ್ ಸಿರ್ಕಾ (42), ಪಾನೂ ಕುಯಿ (40), ರಂಭಾ (17), ಕಂದೆ(12) ಮತ್ತು ಸೋನಿಯಾ (8) ಮೃತರು.
ಈ ಸಂಬಂಧ 9ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಲ್ಲಿ ನಾಲ್ವರು ಪ್ರಭಾವಶಾಲಿ ಕುಟುಂಬದವರೆಂದು ಎಸ್ ಐ ತಾಕೀರ್ ಅಲಾಮ್ ತಿಳಿಸಿದ್ದಾರೆ.

9 ಆರೋಪಿಗಳಲ್ಲಿ ಒಬ್ಬ ರಾಮ್ ಸಿಂಗ್ ಅವರ ಮಗಳನ್ನು ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದ. ಅವಳಿನ್ನೂ ಚಿಕ್ಕವಳು ಎಂದು ರಾಮ್ ಸಿಂಗ್ ಆರೋಪಿಯ ಮನವಿ ತಿರಸ್ಕರಿಸಿದ್ರು.
ಇದರಿಂದಾಗಿ ಆತ ರಾಮ್ ಸಿಂಗ್ ಇಲ್ಲದ ವೇಳೆಯಲ್ಲಿ ಅವರ ಮನೆಗೆ ನುಗ್ಗಿ ನಾಲ್ವರನ್ನು ಕೊಂದಿದ್ದಾನೆ. ರಾಮ್ ಸಿಂಗ್ ಗೆ ಬರುವುದನ್ನು ಕಾದು ಅವರನ್ನೂ ಸಹ ಕೊಲೆ ಮಾಡಿದ್ದಾನೆ.
ನಂತರ ಇತರೆ 8 ಮಂದಿ ಸಹಚರರೊಂದಿಗೆ ಸೇರಿ ಮೃತದೇಹಗಳನ್ನು ಅರಣ್ಯ ಪ್ರದೇಶದಲ್ಲಿ ಹೂತುಹಾಕಿದ್ದಾನೆ ಎನ್ನಲಾಗಿದೆ. ಘಟನೆ ಮಾರ್ಚ್ 14ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.




