ಬಾಲಿವುಡ್ ನಟ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆ ಮಾಡಿದ ಪ್ರಕರಣದ ತೀರ್ಪು ನಾಳೆ (ಏಪ್ರಿಲ್ 5) ಪ್ರಕಟವಾಗಲಿದೆ.
ಜೋಧಪುರ್ ಚೀಫ್ ಜ್ಯುಡಿಸಿಯಲ್ ಮ್ಯಾನಿಸ್ಟ್ರೇಟ್ ಕೋರ್ಟ್ ಸಲ್ಮಾನ್ ಖಾನ್ ವಿರುದ್ಧದ 20ವರ್ಷಗಳ ಹಳೆಯ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪನ್ನು ನೀಡಲಿದೆ.

ಕಂಕಣಿ ಗ್ರಾಮದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ 13 ರಂದು ಜೋದ್ ಪುರ್ ಕೋರ್ಟ್ ನಲ್ಲಿ ಅಂತಿಮ ವಿಚಾರಣೆ ಆರಂಭವಾಗಿತ್ತು.
1998 ಅಕ್ಟೋಬರ್ 1ರಂದು ‘ಹಮ್ ಸಾಥ್ ಸಾಥ್ ಹೈ’ ಸಿನಿಮಾ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಅವರ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟರಾದ ಸೈಫ್ ಅಲಿಖಾನ್ , ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ಸಹ ಆರೋಪಿಗಳೆಂದು ಮಾಡಲಾಗಿದೆ.




