ಕ್ರಿಕೆಟ್ ಅಭಿಮಾನಿಗಳು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಅದು 2002, ನಾಟ್ ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.
ಇದೀಗ ಅವರು ಕೊಹ್ಲಿ ಶರ್ಟ್ ಬಿಚ್ಚುತ್ತಾರೆ ಎಂದಿದ್ದಾರೆ..! 2019ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದರೆ ವಿರಾಟ್ ಕೊಹ್ಲಿ ಶರ್ಟ್ ಬಿಚ್ಚುತ್ತಾರೆ ಎಂದಿದ್ದ ಸೌರವ್ ಮತ್ತೆ ಅದನ್ನು ಪುನರುಚ್ಚಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಸೌರವ್ ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಭಾರತ ಗೆದ್ದರೆ ಕೊಹ್ಲಿ ಸಹ ಶರ್ಟ್ ಬಿಚ್ಚಿ ಸಂಭ್ರಮಿಸ್ತಾರೆ ಎಂದರು. ಅದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಹ್ಲಿ ಸೌರವ್ ಮಾತನ್ನು ಒಪ್ಪಿಕೊಂಡರು.
‘ಭಾರತ ವಿಶ್ವಕಪ್ ಗೆದ್ದರೆ ಕೊಹ್ಲಿ ಲಂಡನ್ ನ ಆಕ್ಸ್‌ಫರ್ಡ್ ರಸ್ತೆಯಲ್ಲಿ ಶರ್ಟ್ ಬಿಚ್ಚಿ ಓಡಲಿದ್ದಾರೆ. ಅವರ ಸಿಕ್ಸ್ ಪ್ಯಾಕ್ ದೇಹ ಸೆರೆ ಹಿಡಿಯಲು ಕ್ಯಾಮರಾಗಳು ಸಿದ್ಧವಿರಬೇಕು ಎಂದು ಗಂಗೂಲಿ ಹೇಳಿದರು.
ಶೇ 120ರಷ್ಟು ಖಚಿತ. ಶರ್ಟ್ ಬಿಚ್ಚಿ ಓಡಲಿದ್ದೇನೆ. ನಾನೊಬ್ಬನೇ ಅಲ್ಲ. ಖಂಡಿತವಾಗಿಯೂ ಹಾರ್ದಿಕ್ ಪಾಂಡ್ಯ ಜತೆಗಿರುತ್ತಾರೆ. ಬೂಮ್ರಾಗೂ ಸಿಕ್ಸ್ ಪ್ಯಾಕ್ ಇದೆ. ಅನೇಕರು ನನ್ನ ಕೂಡಿಕೊಳ್ತಾರೆ ಎಂದು ಕೊಹ್ಲಿ ಹೇಳಿದ್ರು.