ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳ ಸೋಲನುಭವಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ಆರ್ ಸಿ ಬಿಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ಬ್ರೆಂಡನ್ ಮೆಕಲಮ್ 44 ಮತ್ತು ಎಬಿ ಡಿವಿಯಲರ್ಸ್ 44 ಹಾಗೂ ಮಂದಿಪ್ ಸಿಂಗ್ 37 ರನ್ ಗಳ ನೆರವಿನಿಂದ ಆರ್ ಸಿ ಬಿ ನಿಗಧಿತ 20ಓವರ್ ಗಳಲ್ಲಿ 7ವಿಕೆಟ್ ಕಳೆದುಕೊಂಡು 176 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಕೋಲ್ಕತ್ತ ಸುನಿಲ್ ನರೇನ್ ಅವರ ಅರ್ಧಶತಕ (50) , ನಿತೀಶ್ ರಾಣ 34 ಮತ್ತು ನಾಯಕ ಕಾರ್ತಿಕ್ 35 ರನ್ ಗಳ ನೆರವಿನಿಂದ 18.5 ಓವರ್ ಗಳಲ್ಲಿ ಗುರಿ ತಲುಪಿತು.