ವ್ಯಕ್ತಿಯೊಬ್ಬ ಮಗಳನ್ನು ಮದುವೆಯಾಗಿ ಆಕೆಗೆ ಮಗು ಕರುಣಿಸಿ ಆಕೆ ಮತ್ತು ಆಕೆಯ ಮಗುವನ್ನೂ ಕೊಲೆಗೈದು, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಅಮೆರಿಕಾದ ಕನೆಕ್ಟಿಕಟ್ ನಲ್ಲಿ ನಡೆದಿದೆ.
ಆತ ಸ್ಟೀವಲ್ ವಾಲ್ಟರ್ (42), ತನ್ನ ಮಗಳು ಕೈಟಿ ಫ್ಲಡಾಲ್ ನನ್ನು ಮದುವೆಯಾಗಿದ್ದ.
ಕೈಟಿಯನ್ನು ಚಿಕ್ಕವಳಿರುವಾಗ ಆಂಟೋನಿ ಎಂಬುವವರು ಆಕೆಯನ್ನು ದತ್ತು ಪಡೆದುಕೊಂಡಿದ್ದರು. ಕೈಟಿ ದೊಡ್ಡವಳಾದ ಮೇಲೆ ತನ್ನ ಸ್ವಂತ ತಂದೆ-ತಾಯಿಯ ಪತ್ತೆಗೆ ಮುಂದಾಗಿದ್ದಳು. ಹೀಗೆ ಸೋಶಿಯಲ್ ಮೀಡಿಯಾದ ಮೂಲಕ ಸ್ಟೀವನ್ ವಾಲ್ಟರ್ ನೇ ತನ್ನ ತಂದೆ ಎಂದು ಪತ್ತೆ ಮಾಡಿದ್ದಾಳೆ. ಪರಿಚಿತನಾ ಸ್ಟೀವನ್ ತನ್ನ ಮಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ಮಗುವನ್ನೂ ಕರುಣಿಸಿದ್ದ. ಈಕೆ ಗರ್ಭಿಣಿಯಾಗಿದ್ದನ್ನು ತಿಳಿದ ನಿಜವಾದ ತಾಯಿ ಸಂವಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಕೆ ಪೊಲೀಸ್ ಠಾಣೆ ಮೆಟ್ಟಲಿರೇರಿದ್ದರು. ಅಷ್ಟರಲ್ಲೇ ಸ್ಟೀವನ್ ಮದುವೆಗೆ ತಯಾರಿ ನಡೆಸಿದ್ದ. ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಮತ್ತೆ ಇಬ್ಬರು ಒಂದಾಗುವುದಿಲ್ಲ ಎಂಬ ಷರತ್ತಿನ ಮೇಲೆ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು.
ಕೈಟಿ ದೂರವಾಗುತ್ತಿದ್ದಂತೆ ಆಕೆಯನ್ನು,ಮಗುವನ್ನು, ದತ್ತು ತಂದೆಯನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.