ಇಡೀ ದೇಶಕ್ಕೆ ಮಾದರಿಯಾಯಿತು ಈ ನಿರ್ಧಾರ..! ಹೆಣ್ಣಿಗೆ ಇದಕ್ಕಿಂತ ಉತ್ತಮ ಸಮಾಜ ಇನ್ನೆಲ್ಲಿದೆ..?

Date:

ಹೆಚ್ಚಿನ ಜನರಿಗೆ ಹೆಣ್ಣು ಎಂದರೆ ತಾತ್ಸಾರ ಭಾವನೆ ಮೂಡುತ್ತದೆ. ಕೆಲವೊಮ್ಮೆ ನಾಲ್ಕೈದು ಹೆಣ್ಣು ಮಕ್ಕಳು ಹುಟ್ಟಿದರೂ ಕೂಡಾ ಗಂಡು ಮಗು ಹುಟ್ಟಿರುವುದಿಲ್ಲ. ಆದ್ದರಿಂದ ಗಂಡು ಮಗುವಾಗುವ ತನಕ ಕಾಯುವವರು ನಮ್ಮ ಸಮಾಜದಲ್ಲಿ ಎಷ್ಟೋ ಜನರಿದ್ದಾರೆ. ಆದರೆ ಇಲ್ಲೊಂದು ಗ್ರಾಮವಿದೆ. ಇಲ್ಲಿ ಮೊದಲೆರಡು ಮಕ್ಕಳು ಗಂಡೇ ಆಗಿರಲಿ ಅಥವಾ ಹೆಣ್ಣೆ ಆಗಿರಲಿ, ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಅಪೇಕ್ಷಿಸಬಾರದು ಎಂದು ಉತ್ತಮ ಆದೇಶ ಹೊರಡಿಸಿದೆ.
ಹೌದು.. ಹರಿಯಾಣದ ಖಾಪ್ ಪಂಚಾಯ್ತಿಯು ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನಿಸಿದೆ. ಅದೇನೆಂದರೆ ಒಂದು ಕುಟುಂಬಕ್ಕೆ ಎರಡೇ ಮಕ್ಕಳಿರಬೇಕು. ಅದಕ್ಕಿಂತ ಹೆಚ್ಚು ಮಕ್ಕಳನ್ನು ಬಯಸುವಂತಿಲ್ಲ. ಒಂದು ವೇಳೆ ಮೊದಲೆರಡೂ ಮಕ್ಕಳು ಹೆಣ್ಣಾಗಿದ್ದರು ಕೂಡಾ ಅವರಿಗೆ ಉತ್ತಮ ಶಿಕ್ಷಣ ಒದಗಿಸಿ ಜೀವನ ರೂಪಿಸಿಕೊಳ್ಳುವಂತೆ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಇದರಿಂದ 2012ರಲ್ಲಿ ಹರಿಯಾಣದಲ್ಲಿ ಗಂಡು ಹೆಣ್ಣಿನ ಅನುಪಾತ 1000:883 ಇದ್ದಿದ್ದು, ಈಗ ಸ್ವಲ್ಪ ಪ್ರಮಾಣದಲ್ಲಿ ಸುಧಾರಿಸುವಂತಾಗಿದೆ.
ಈ ಖಾಪ್ ಪಂಚಾಯತ್ ಮತ್ತೊಂದು ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ 1 ರೂಪಾಯಿಗಿಂತ ಹೆಚ್ಚಿನ ವರದಕ್ಷಿಣೆ ಪಡೆಯಬಾರದು ಎಂದು ಆದೇಶ ಹೊರಡಿಸಿದೆ. ಈ ನಿರ್ಧಾರ ಹೆಣ್ಣಿನ ಮೇಲಿನ ವರದಕ್ಷಿಣೆಯ ದೌರ್ಜನ್ಯ ಕಡಿಮೆಯಾಗಲು ನೆರವಾಗಿದೆ.
ಇನ್ನೊಂದು ಅಚ್ಚರಿ ಎಂದರೆ ಹೆಣ್ಣಿನ ಮೇಲಿನ ಅತ್ಯಾಚಾರಗಳಿಗೆ ಅವರು ಧರಿಸುವ ಬಟ್ಟೆ ಕಾರಣವಲ್ಲ ಎಂದು ಹೇಳಿದೆ. ಅಲ್ಲದೇ ಹೆಣ್ಣಿಗೆ ಜೀನ್ಸ್ ಧರಿಸುವ ಹಾಗೂ ಮೊಬೈಲ್ ಗಳನ್ನು ಬಳಸುವ ಪರಮಾಧಿಕಾರವನ್ನು ನೀಡಿದೆ. ಅಲ್ಲದೇ ಮದುವೆಯ ಮೆರವಣಿಗೆಯಲ್ಲಿ ಕಡಿಮೆ ಸಂಖ್ಯೆಯ ಜನರು ಭಾಗವಹಿಸಬೇಕು ಎಂದು ಹೇಳಿ ಅಚ್ಚರಿ ಮೂಡಿಸಿದೆ.
ಖಾಪ್ ಪಂಚಾಯ್ತಿಯ ಈ ನಿರ್ಧಾರ ಹೆಚ್ಚುತ್ತಿರುವ ಜನಸಂಖ್ಯೆ ಹೆಚ್ಚಳ ಹಾಗೂ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ನೆರವಾಗುತ್ತಿದೆ. ಇದರಿಂದ ಖಾಪ್ ಪಂಚಾಯ್ತಿಯ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಮಾದರಿಯ ಸಮಾಜ ಎಲ್ಲಾ ಕಡೆ ನಿರ್ಮಾಣವಾದರೆ ಮಹಾತ್ಮ ಗಾಂಧೀಜಿಯವರು ಕಂಡಿದ್ದ ರಾಮರಾಜ್ಯದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಸಾಮಾಜಿಕ ಜಾಲತಾಣಗಳಲ್ಲಿ ಇವರ ಒಂದು ಪೋಸ್ಟ್ ಮೌಲ್ಯ 8289993.75 -19898985.00 ರೂಪಾಯಿಗಳು..!

78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!

ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!

ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...