ಬಾಲ್ ಟ್ಯಾಪರಿಂಗ್ ಪ್ರಕರಣಕ್ಕೆ ಸಿಲುಕಿ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ನಿಷೇಧಕ್ಕೆ ಒಳಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ , ಐಪಿಎಲ್ ವೇತನ, ಪ್ರಾಯೋಜಿಕತ್ವ ಹಣ ಕಳೆದು ಕೊಂಡಿರುವ ಸ್ಮಿತ್ ಹಾಗೂ ವಾರ್ನರ್ ಆಸ್ತಿಯನ್ನು ಮಾರಾಟ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.
ಈಗ ಕೆಲಸದ ಅನಿವಾರ್ಯತೆ ಇದ್ದು, ಹೊಸ ಉದ್ಯಮದತ್ತ ಮುಖಮಾಡಿದ್ದಾರೆ ಎಂದು ತಿಳಿದು ಬಂದಿದೆ.