ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ದೇಶೀಯ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.
2017ರ ಸೆಪ್ಟೆಂಬರ್ ನಲ್ಲಿ ಎಂಐ ಎ1 ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬಳಿಕ ಆನ್‍ಲೈನ್ ಮತ್ತು ಆಫ್‍ಲೈನ್ ಸ್ಟೋರ್ ನಲ್ಲಿ ಲಭ್ಯವಿತ್ತು. ಇದೀಗ ಎಲ್ಲಿಯೂ ಲಭ್ಯವಾಗುತ್ತಿಲ್ಲ.
ಪ್ಲಿಪ್ ಕಾರ್ಟ್ ಮೊದಲಾದ ತಾಣದಲ್ಲಿ “ಔಟ್ ಆಫ್ ಸ್ಟಾಕ್” ಆಗಿದೆ…!
ಈ ಹಿಂದೆ ಟೆಕ್ ಮಾಧ್ಯಮವೊಂದು ಕ್ಸಿಯೋಮಿ ಕಂಪೆನಿ ಈ ಫೋನ್ ಮಾರಾಟವನ್ನು ನಿಲ್ಲಿಸಿದೆ ಎಂದು ವರದಿ ಮಾಡಿತ್ತು. ಈಗ ಈ ವರದಿಗೆ ಪೂರಕ ಎಂಬಂತೆ ಈ ಫೋನ್ ಅಲಭ್ಯವಾಗಿದೆ. ಕೆಲ ತಿಂಗಳ ಹಿಂದೆ ಆಫ್ ಲೈನ್ ಸ್ಟೋರ್ ಗಳಿಗೆ ಈ ಫೋನ್ ವಿತರಣೆಯನ್ನು ಕ್ಸಿಯೋಮಿ ನಿಲ್ಲಿಸಿತ್ತು. ಈ ಫೋನಿನ ಉತ್ತಾರಧಿಕಾರಿ ಎಂದೇ ಪರಿಗಣಿಸಲಾಗಿರುವ ಎಂಐ ಎ2 ಚೀನಾದಲ್ಲಿ ಬಿಡುಗಡೆಯಾಗಿದ್ದು, ಈ ಫೋನ್ ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಎ1 ಫೋನಿನ ಮಾರಾಟವನ್ನು ಕ್ಸಿಯೋಮಿ ನಿಲ್ಲಿಸಿರಬಹುದೆಂದು ವರದಿಯಾಗಿದೆ.