ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಎದುರು ನಿರಾಯಾಸ ಗೆಲುವು ದಾಖಲಿಸಿದೆ.
ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ಸ್ ತವರು ನೆಲದ ಲಾಭ ಪಡೆಯುವಲ್ಲಿ ವಿಫಲವಾಗಿ 7 ವಿಕೆಟ್ ಗಳ ಸೋಲನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ನಿಗಧಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು.ಆರಂಭಿಕರಾದ ನಾಯಕ ಅಜಿಂಕ್ಯ ರಹಾನೆ (36) , ಡಿ ಆರ್ಕೆ ಶಾರ್ಟ್ (44) ಹೊರತುಪಡಿಸಿ ಉಳಿದ ಬ್ಯಾಟ್ಸ್ ಮನ್ ಗಳಿಂದ ನಿರೀಕ್ಷಿತ ರನ್ ಬರಲಿಲ್ಲ.
ಗುರಿ ಬೆನ್ನಟ್ಟಿದ ಕೋಲ್ಕತ್ತಾ ಆರಂಭದಲ್ಲೇ ಲೈನ್ ವಿಕೆಟ್ ಕಳೆದುಕೊಂಡರೂ ಸುಲಭದಲ್ಲಿ ಗುರಿ ತಲುಪಿತು.
ರಾಬಿನ್ ಉತ್ತಪ್ಪ (48) ಸುನೀಲ್ ನಾರಯಣ್ (35) ನಾಯಕ ದಿನೇಶ್ ಕಾರ್ತಿಕ್ (ಅಜೇಯ 42) ಮತ್ತು ನಿತೀಶ್ ರಾಣ ( ಅಜೇಯ 35) ರನ್ ಗಳ ಬಲದಿಂದ 18.5 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆಲುವಿನ ನಗೆಬೀರಿತು.