ಭವಿಷ್ಯದ ಟೀಂ ಇಂಡಿಯಾವನ್ನು ಕಟ್ಟಲು ಬಿಸಿಸಿಐ ಐಪಿಎಲ್ ಮೇಲೆ ಕಣ್ಣಿಟ್ಟಿದೆ. ಐಪಿಎಲ್ ಆಡುತ್ತಿರುವ 23 ಯುವ ಆಟಗಾರರ ಮೇಲೆ ಕಣ್ಣಿರಿಸಿರುವ ಬಿಸಿಸಿಐ ಮೂರು ಗುಂಪುಗಳನ್ನಾಗಿ ವಿಂಗಡಿಸಿದೆ. ಇವರಲ್ಲಿ ಕೆಲವರು ಯಾವಾಗ ಬೇಕಾದರೂ ಟೀಂ ಇಂಡಿಯಾ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಯಂಕ್ ಅಗರ್ ವಾಲ್, ಪೃಥ್ವಿ ಶಾ , ಶಿವಂ ಮಾವಿ, ಇಶಾನ್ ಕಿಶಾನ್, ರಿಷಬ್ ಪಂತ್, ಆವೇಶ್ ಖಾನ್, ಖಲೀಲ್ ಅಹಮ್ಮದ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ವಾಷಿಂಗ್ ಟನ್ ಸುಂದರ್, ವಿಜಯಶಂಕರ್, ಜಯದೇವ್ ಉನದ್ಕತ್, ಬಾಸಿಲಿ ಥಂಪಿ, ದೀಪಕ್ ಹೂಡ, ಮಯಾಂಕ್ ಅಗರ್ ವಾಲ್, ರವಿಕುಮಾರ್ , ಸಮರ್ಥ್ , ನವದೀಪ್ ಸೈನಿ, ಸಿದ್ಧಾರ್ಥ ಕೌಲ್, ಹನುಮ ವಿಹಾರಿ, ಅಂಕಿತ್ ಭಾವ್ನೆ ಬಿಸಿಸಿಐಕಣ್ಣಿಗೆ ಬಿದ್ದಿರೋ ಪ್ರಮುಖ ಯುವ ಆಟಗಾರರು.