ನಿಮಗೂ ಇದು ಅನುಭಕ್ಕೆ ಬಂದಿರಬಹುದು…? ಬಹುತೇಕ ಎಟಿಎಂಗಳಲ್ಲಿ ಹಣ ಸಿಗ್ತಿಲ್ಲ. ಇದರಿಂದ ಜನ ಹೈರಾಣಾಗಿದ್ದಾರೆ. ಆದರೆ ಕಳೆ್ ಒಂದೇ ತಿಂಗಳಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 45 ಸಾವಿರ ಕೋಟಿ ರೂ ಡ್ರಾ ಮಾಡಲಾಗಿದೆ. ಇದು ಉದ್ದೇಶಪೂರ್ವಕವಾಗಿ ರಾಜಕೀಯ ಪಕ್ಷಗಳು ಮಾಡುತ್ತಿರುವ ಕುತಂತ್ರ ಎನ್ನಲಾಗುತ್ತಿದೆ.
2ಸಾವಿರ ರೂ ಮುಖಬೆಲೆಯ ನೋಟುಗಳನ್ನು ಡ್ರಾ ಮಾಡಿ ಸಂಗ್ರಹಿಸಲಾಗುತ್ತಿದೆ . ಇದರಿಂದ ಎಟಿಎಂಗಳಲ್ಲಿ ಹಣದ ಅಭಾವ ಎದುರಾಗಿದೆ ಎಂದು ತಿಳಿದುಬಂದಿದೆ.
ಆದರೆ, ಇದರಿಂದ ಹೊರತಾಗಿ ದೇಶದ ಜಿಡಿಪಿ ಪ್ರಮಾಣಕ್ಕೆ ನೋಟಿನ ಶೇಕಡಾವಾರು ಪ್ರಮಾಣ ಕಡಿಮೆಯಾಗಿರುವುದೇ ನಗದು ಕೊರತೆಗೆ ಕಾರಣ ಎಂದು ತಿಳಿದುಬಂದಿದೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶದ ಜಿಡಿಪಿಗೆ ಶೇ.11.60 ನಗದು ಲಭ್ಯವಿತ್ತು. ಆದರೆ ಈಗ 50 ಸಾವಿರ ಕೋಟಿ ರೂ ಹೆಚ್ಚಿನ ನೋಟು ಮಾರುಕಟ್ಟೆ ಯಲ್ಲಿದ್ದರೂ ನೋಟಿನ ಪ್ರಮಾಣ ಶೇ.10.70ರಷ್ಟಿದೆ. ವಾರಾಂತ್ಯದೊಳಗೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಈಗಾಗಲೇ ಆರ್ಬಿಐ ತಿಳಿಸಿದಂತೆ ಇನ್ನೊಂದು ತಿಂಗಳಲ್ಲಿ 500 ರೂ. ಮುಖಬೆಲೆಯ 75 ಸಾವಿರ ಕೋಟಿ ರೂ. ಮಾರುಕಟ್ಟೆಗೆ ಬರಲಿದೆ.
100, 200 ಹಂಚಿಕೆ ಹೆಚ್ಚಲಿ: ದೇಶದ ಆರ್ಥಿಕ ವ್ಯವಸ್ಥೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ 2 ಸಾವಿರ ರೂ ನೋಟು ಬಂದಿದೆ. ನಗದು ಸಮಸ್ಯೆ ಕಡಿಮೆ ಮಾಡಲು ಕೂಡಲೇ 100 ಹಾಗೂ 200 ರೂ ಮುಖಬೆಲೆಯ ನೋಟಿನ ಮುದ್ರಣ ಹಾಗೂ ಹಂಚಿಕೆ ಹೆಚ್ಚಿಸಬೇಕು ಎಂದು ಎಸ್ಐಎಸ್ ಅಧ್ಯಕ್ಷ ರಿತುರಾಜ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿನ ಎಟಿಎಂಗಳಿಗೆ ಹಣ ಪೂರೈಸುವ ಸಂಸ್ಥೆಗಳಲ್ಲಿ ಎಸ್ಐಎಸ್ ಕೂಡ ಒಂದು. ಅವರು ಹೇಳುವಂತೆ ಕಳೆದೊಂದು ತಿಂಗಳಲ್ಲಿ ಎಟಿಎಂನಿಂದ ಬಿಡಿಸಿಕೊಳ್ಳುತ್ತಿರುವ ಸರಾಸರಿ ಮೊತ್ತವು 3 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಏರಿದೆ.