ಅಮೆರಿಕಕ್ಕೆ ಎಚ್1 ಬಿ ವೀಸಾದಡಿ ಬಂದು ನೆಲೆಸಿರುವವರ ಸಂಗಾತಿಗೆ ಅಮೆರಿಕದಲ್ಲಿ ನೌಕರಿ ಮಾಡಲು ನೀಡಲಾಗಿರುವ ಪರವಾನಗಿಯನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿಂತನೆ ಅಂತಿಮ ಹಂತಕ್ಕೆ ಬಂದಿದೆ. ಈ ವರ್ಷದ ಬೇಸಿಗೆಯ ಕೊನೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂಬ ಮಾಹಿತಿಯನ್ನು ವಲಸೆ ವಿಭಾಗದ ಉನ್ನತಾಧಿಕಾರಿಗಳು ಸಂಸದರಿಗೆ ನೀಡಿದ್ದಾರೆ.
ಎಚ್ 1ಬಿ ವೀಸಾದರರ ಸಂಗಾತಿಗಳು ಎಚ್ 4 ವೀಸಾದಡಿ ಅಮೆರಿಕದಲ್ಲಿ ನೆಲೆಸಿದ್ದಾರೆ. 2005ರಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ಇವರಿಗೂ ಕೆಲಸ ಮಾಡಲು ಪರವಾನಗಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಸುಮಾರು 71000ಎಚ್ 4 ವೀಸಾದರರು, ಅಮೆರಿಕದಲ್ಲಿ ನೌಕರಿ ಮಾಡ್ತಿದ್ದಾರೆ. ಇವರಲ್ಲಿ ಶೇ 93ರಷ್ಟು ಮಂದಿ ಭಾರತೀಯರಾಗಿದ್ದಾರೆ. ಶೇ. 94ರಷ್ಟು ಮಹಿಳೆಯರಿದ್ದಾರೆ.