ಅಮೆಜಾನ್ ಬಳಿ ಲವ್ವರ್ ಬೇಕೆಂದು ಕೇಳಿದ ಯುವತಿ…! ಅದಕ್ಕೆ ಅಮೆಜಾನ್ ನೀಡಿದ ಉತ್ತರ ಏನ್ ಗೊತ್ತಾ?

Date:

ಅಮೆಜಾನ್ ಎ ನಿಂದ ಝೆಡ್ ವರೆಗೆ ಎಲ್ಲವನ್ನೂ ಮಾರಾಟ ಮಾಡುತ್ತೇವೆ ಎಂದು ತನ್ನ ಲೋಗೋ ದಲ್ಲಿ ಹೇಳಿಕೊಂಡಿದೆ. ಆದರೆ, ರಾಷ್ಟ್ರ ರಾಜಧಾನಿ ದೆಹಲಿಯ ಯುವತಿ ನೀಡಿದ ಬೇಡಿಕೆಗೆ ದಂಗಾಗಿ ಹೋಗಿದೆ. ಅವಳ ಬೇಡಿಕೆಯ ಪ್ರಶ್ನೆಗೆ ತಕ್ಕಂತೆ ಉತ್ತರ ನೀಡುವಲ್ಲಿಯೂ ಯಶಸ್ವಿಯಾಗಿದೆ.


ಎಲ್ಲವನ್ನೂ ಮಾರಾಟ ಮಾಡೋ ಅಮೆಜಾನ್ ನನಗೊಬ್ಬ ಪ್ರಿಯತಮನನ್ನು ಹುಡುಕಿಕೊಡು ಎಂದು ಟ್ವೀಟ್ಟರ್ ನಲ್ಲಿ ಯುವತಿ ಬೇಡಿಕೆ ಇಟ್ಟಿದ್ದಾಳೆ‌. ಈ ಟ್ವಿಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಕೆಯ ಬೇಡಿಕೆಗೆ ಅಮೆಜಾನ್ ಕೂಡ ಸ್ಪಂದಿಸಿದೆ.

ಜಗತ್ತಿನ ಇ-ಕಾರ್ಮಸ್ ದೊಡ್ಡ ಕಂಪನಿಯಾದ ನಿಮ್ಮ ಅಮೆಜಾನ್‌ನಲ್ಲಿ ತುಂಬ ದಿನಗಳಿಂದ ಹುಡುಕುತ್ತಿರುವ ವಸ್ತುವೊಂದು ದೊರೆಯುತ್ತಿಲ್ಲ ಎಂದು ಯುವತಿಯೊಬ್ಬಳು ಟ್ವಿಟ್ ಮಾಡಿದ್ದಾಳೆ.

ಟ್ವಿಟ್‌ಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಅಮೆಜಾನ್, ನಾವು ಸಂಸ್ಥೆಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ಕ್ರಿಯಾಶೀಲರಾಗಿದ್ದೇವೆ. ನಿಮಗೇ ಬೇಕಾದ ಉತ್ಪನ್ನ ಯಾವುದು ಎಂದು ತಿಳಿದುಕೊಳ್ಳಬಹುದೇ ಎಂದು ಪ್ರಶ್ನಿಸಿದೆ.

 

ಅದಕ್ಕೆ ಯುವತಿ, ‘ಬಸ್ ಎಕ್ ಸನಮ್ ಚಾಹಿಯೇ, ಆಶಿಕಿ ಕೆಲಿಯೇ’ (ಏನಿಲ್ಲ ಪ್ರೀತಿಸಲು ಒಬ್ಬ ಪ್ರಿಯತಮ ಬೇಕು) ಎಂದು ಉತ್ತರಿಸಿದ್ದಾಳೆ.

ಪ್ರಿಯತಮ ಬೇಕೆಂದ ಯುವತಿಗೆ ಅಮೆಜಾನ್, ‘ಯೇ ಅಖಾ ಇಂಡಿಯಾ ಜಾನತಾ ಹೈ, ಹಮ್ ತುಮ್ಪೆ ಮರ್ತೆ ಹೈ, ದಿಲ್ ಕ್ಯಾ ಚೀಜ್ ಹೈ ಜಾನಮ್, ಅಪನಿ ಜಾನ್ ತೇರೆ ನಾಮ್ ಕರ್ತಾ ಹೈ’ (ಇದು ಇಡೀ ಇಂಡಿಯಾಗೆ ಗೊತ್ತು, ನಾನು ನಿಮಗಾಗಿ ಸಾಯಲು ಸಹ ಸಿದ್ಧನಿದ್ದೇನೆ. ಅಂತಹದರಲ್ಲಿ ಈ ಹೃದಯ ಏನ್ ಮಹಾ, ನನ್ನ ಪ್ರಾಣ ನಿನಗಾಗಿ) ಎಂದು ‘ಜಾನ್ ತೇರೆ ನಾಮ್’ ಚಿತ್ರದ ಹಾಡಿನ ಲೈನ್‌ಗಳನ್ನು ಟ್ವಿಟ್ ಮಾಡಿದೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...