ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ನಡರಯಲಿರುವ ಐಸಿಸಿ ವಿಶ್ವಕಪ್ ನ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಪ್ರತಿ ತಂಡಗಳು ಲೀಗ್ ನಲ್ಲಿ 9 ಪಂದ್ಯಗಳನ್ನು ಆಡಲಿವೆ.
ಮೇ 30ರಂದು ದಿ ಓವಲ್ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣೆಸಲಿವೆ.
ಭಾರತ ಜೂನ್ 5ರಂದು ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಪಂದ್ಯವಾಡಲಿದೆ. ಜೂ 16ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಜುಲೈ9ರಂದು ಮೊದಲ ಸೆಮಿಫೈನಲ್ , ಜುಲೈ 11ರಂದು 2ನೇ ಸೆಮಿಫೈನಲ್ ನಡೆಯಲಿದೆ. ಜುಲೈ 14ರಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಫೈನಲ್ ನಡೆಯಲಿದೆ.
ಭಾರತದ ವೇಳಾಪಟ್ಟಿ
ಜೂ 5 – ದ. ಆಫ್ರಿಕಾ ವಿರುದ್ಧ
ಜೂ 9 – ಆಸ್ಟ್ರೇಲಿಯಾ ವಿರುದ್ಧ
ಜೂ 13- ನ್ಯೂಜಿಲೆಂಡ್ ವಿರುದ್ಧ
ಜೂ 16- ಪಾಕಿಸ್ತಾನ್ ವಿರುದ್ಧ
ಜೂ 22- ಅಫ್ಘಾನಿಸ್ತಾನದ ವಿರುದ್ಧ
ಜೂ 27- ವೆಸ್ಟ್ ಇಂಡಿಸ್ ವಿರುದ್ಧ
ಜೂ 30 ಇಂಗ್ಲೆಂಡ್ ವಿರುದ್ಧ
ಜು 02- ಬಾಂಗ್ಲಾದೇಶದ ವಿರುದ್ಧ
ಜು 06-ಶ್ರೀಲಂಕಾ ವಿರುದ್ಧ