ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ಗಳಿಂದ ಸೋತಿರುವುದು ಗೊತ್ತೇ ಇದೆ.
205 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿದ್ದರೂ ಆ ಸ್ಕೋರನ್ನು ಸಮರ್ಥಿಸಿಕೊಳ್ಳಲು ಆರ್ ಸಿಬಿ ಸಾಧ್ಯವಾಗಿಲ್ಲ.
ಗುರಿ ಬೆನ್ನತ್ತಿದ ಸಿಎಸ್ ಕೆ ಒಂದು ಹಂತದಲ್ಲಿ 74 ರನ್ ಗಳಿಗೆ 4ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಆಟಗಾರ ಅಂಬಟಿ ರಾಯ್ಡು (82) ಅವರ ಜೊತೆಗೂಡಿದ ನಾಯಕ ಮಹೇಂದ್ರ ಸಿಂಗ್ ಧೋನಿ (70) 7 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಆರ್ ಸಿಬಿಯಿಂದ ಗೆಲುವನ್ನು ತಮ್ಮ ತಂಡದ ತೆಕ್ಕೆಗೆ ಹಾಕಿಕೊಂಡರು.
ಪಂದ್ಯದ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತಾಡಿದ ಆರ್ ಸಿಬಿ ನಾಯಕ ಕೊಹ್ಲಿ , ಧೋನಿ ಸಿಡಿಸುವ ಸಿಕ್ಸರ್ ನೋಡಲು ಸಂತೋಷವಾಗುತ್ತೆ. ಆದರೆ, ನಮ್ಮ ವಿರುದ್ಧ ಹೊಡೆದಾಗ ಮಾತ್ರ ಆಗಲ್ಲ. ಧೋನಿ ಬ್ಯಾಟಿಂಗ್ ಮಾಡೋದನ್ನು ನೋಡುವುದನ್ನು ತಾನು ಆನಂದಿಸ್ತೀನಿ ಎಂದು ಟೀಂ ಇಂಡಿಯಾದ ನಾಯಕ ಕೊಹ್ಲಿ, ಮಾಜಿ ನಾಯಕ ಧೋನಿಯ ಬ್ಯಾಟಿಂಗ್ ಗೆ ತಲೆದೂಗಿದ್ದಾರೆ.