ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ತಮ್ಮನ್ನು ಸ್ಟಂಪ್ ಔಟ್ ಮಾಡಲು ವಿಫಲರಾದ ಯುವ ಕೀಪರ್ ಇಶಾನ್ ಕಿಶಾನ್ ಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಕೀಪಿಂಗ್ ಕುರಿತು ಪಾಠ ಮಾಡಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಇಶಾನ್ ಧೋನಿಯನ್ನು ಸ್ಟಂಪ್ ಮಾಡೋ ಅವಕಾಶ ಹಾಳು ಮಾಡಿಕೊಂಡಿದ್ದರು. 15ನೇ ಓವರ್ ನಲ್ಲಿ ಮಾರ್ಕಂಡೆ ಅವರ 3ನೇ ಎಸೆತ ವೈಡ್ ಆಗಿತ್ತು. ಧೋನಿ ಕ್ರೀಸ್ ಬಿಟ್ಟಿದ್ದರು. ಕೀಪರ್ ಇಶಾನ್ ಗೆ ಸ್ಟಂಪ್ ಮಾಡೋ ಅವಕಾಶವಿತ್ತು. ಆದರೆ, ಇಶಾನ್ ನಿಧಾನ ಮಾಡಿದರು.
ಮೊದಲ ಇನ್ನಿಂಗ್ಸ್ ಬಳಿಕ ಧೋನಿ ಇಶಾನ್ ಗೆ ಕೀಪಿಂಗ್ ಹೇಗೆ ಮಾಡಬೇಕೆಂದು ಹೇಳಿಕೊಟ್ಟರು.
ಕೆಲವು ದಿನಗಳ ಹಿಂದೆ ಮುಖಕ್ಕೆ ಬಾಲು ಬಡಿದು ಇಶಾನ್ ಗಾಯಗೊಂಡಿದ್ದರು. ಆಗ ಸ್ಚತಃ ಧೋನಿ ನೆಟ್ ನಲ್ಲಿ ಅಭ್ಯಾಸ ಮಾಡ್ತಿದ್ದ ಇಶಾನ್ ಬಳಿ ಹೋಗಿ ಬ್ಯಾಟಿಂಗ್ ಮತ್ತು ಕೀಪಿಂಗ್ ಪಾಠ ಮಾಡಿದ್ದರು.