ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚೆ ಸೊಂಟದಿಂದ ಜಾರಿ, ಅವರು ತುಂಬು ವೇದಿಕೆಯಲ್ಲೇ ಕಟ್ಟಿಕೊಂಡ ಪ್ರಸಂಗ ಕಲಬುರಗಿಯಲ್ಲಿ ನಡಿದಿದೆ.
ಕೆಲವು ದಿನಗಳ ಹಿಂದೆ ನಡದ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆದಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಕಲಬುರಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಗೆ ಸಿದ್ದರಾಮಯ್ಯ ಬಂದಿದ್ದರು. ಆಗ ಪಂಚೆ ಸೊಂಟದಿಂದ ಜಾರಿದ್ದು ಅನುಭವಕ್ಕೆ ಬಂದಿದ್ದು , ಸಿದ್ಧರಾಮಯ್ಯ ವೇದಿಕೆಯಲ್ಲಿಯೇ ಪಂಚೆಯನ್ನು ಕಟ್ಟಿಕೊಂಡಿದ್ದಾರೆ. ಕಾರ್ಯಕರ್ತರು ಹಾರ ಹಾಕುವಾಗಲೂ ಸಿಎಂ ಪಂಚೆ ಕಟ್ಟಿ ಕೊಳ್ಳುವಲ್ಲಿ ಬ್ಯುಸಿ ಆಗಿದ್ರು…