ಅಪ್ರಾಪ್ತ ಸಹೋದರನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಾಮ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಉಮೇರ್ ಖಾನ್ ಮತ್ತು ಅಮಾನುಲ್ಲಾ ಅಂತಾ ಪೊಲೀಸರು ತಿಳಿಸಿದ್ದಾರೆ.
ಸಂತ್ರೆಸ್ತೆ ಮನೆಗೆ ನುಗ್ಗಿದ ಉಮೇರ್ ಖಾನ್ ಮತ್ತು ಅಮಾನುಲ್ಲಾ ಮನೆಯಲ್ಲಿ ದ್ದ ಅಪ್ರಾಪ್ತ ಸಹೋದರನಿಗೆ ಥಳಿಸಿ ಆತನ ಮುಂದೆಯೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಘಟನೆ ವೇಳೆ ಮನೆಯಲ್ಲಿ ಸಹೋದರ ಮತ್ತು ಯುವತಿ ಬಿಟ್ಟರೆ ಮತ್ಯಾರು ಇರಲಿಲ್ಲ ಎಂದು ತಿಳಿದುಬಂದಿದೆ. .ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.