ಆತನ ಪತ್ನಿಗೆ ಪದೇ ಪದೇ ಜ್ವರ ಬರಲಾರಂಭಿಸಿತು , ನಿರಂತರ ವಾಂತಿಯಿಂದ ಆಕೆ ಬಳಲಿದಳು. ಗಾಬರಿಗೊಂಡ ಅವನು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಪರೀಕ್ಷೆ ಮಾಡಿಸಿದ ಬಳಿಕ ವೈದ್ಯರು ಶಾಕಿಂಗ್ ನ್ಯೂಸ್ ನೀಡಿದರು….! ಮಡದಿ ಏಡ್ಸ್ ನಿಂದ ಬಳಲುತ್ತಿದ್ದಳು.
ವಿಷಯ ತಿಳಿದ ಕೋಪಗೊಂಡ, ಆಕೆಯ ಜೊತೆ ಸಂಸಾರ ಮಾಡಲಾರೆ ಎಂದು ದೂರವಾದ. ಆಕೆಯನ್ನು ಮನೆಯಿಂದ ಹೊರಗೆ ಹಾಕಿದ.
ಹೆಂಡ್ತಿಯಿಂದ ತನಗೂ ರೋಗ ಬಂದಿರಬಹುದು ಎಂದು ತಾನೂ ಪರೀಕ್ಷಿಸಿದ . ಆಗ ಆತನಿಗೂ ಏಡ್ಸ್ ಇದೆ ಎಂದು ತಿಳಿಯಿತು…!
ಹೆಂಡತಿಯಿಂದಲೇ ಏಡ್ಸ್ ಬಂದಿದೆ ಎಂದು ಭಾವಿಸುತ್ತಾನೆ. ಆದರೆ , ಮಹಾರಾಷ್ಟ್ರದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿರುವ ಆತ ಅನೈತಿಕ ಸಂಬಂಧ ಇಟ್ಟುಕೊಂಡ ಮಹಿಳೆಯನ್ನು ವಿಚಾರಿಸಿದಾಗ ಅವಳಿಂದ ತನಗೆ ಏಡ್ಸ್ ಬಂದಿರೋದಾಗಿ ಗೊತ್ತಾಗುತ್ತೆ. ತನ್ನಿಂದ ತನ್ನ ಹೆಂಡ್ತಿಗೆ ಏಡ್ಸ್ ಬಂದಿದೆ. ಆಕೆಯ ಬಾಳು ನನ್ನಿಂದಲೇ ಹಾಳಾಯಿತು ಎಂದು ಮನನೊಂದು ಆಕೆಯ ಹೆಸರಲ್ಲಿ ಮನೆ ಆಸ್ತಿಯನ್ನೆಲ್ಲಾ ಬರೆದು ಆತ್ಮಹತ್ಯೆಗೆ ಶರಣಾಗುತ್ತಾನೆ.