ವೆಸ್ಟ್ ಇಂಡಿಸ್ ಕ್ರಿಕೆಟಿಗ ಕ್ರೀಸ್ ಗೇಲ್ ಅವರನ್ನು ಐಪಿಎಲ್ ನಲ್ಲಿ ಆರ್ ಸಿಬಿ ಹೊರಗಿಟ್ಟಿತು. ಒಂದು ಹಂತದಲ್ಲಿ ಗೇಲ್ ಅವರತ್ತ ಯಾವ ಪ್ರಾಂಚೈಸಿಯೂ ಮುಖ ಮಾಡಿಲ್ಲ. ಆದರೆ ವೀರೆಂದ್ರ ಸೆಹ್ವಾಗ್ ಕೃಪಾಕಟಾಕ್ಷದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಬ್ಯಾಟ್ ಬೀಸುವ ಅವಕಾಶ ಪಡೆದ ಗೇಲ್ ತನ್ನ ಸಾಮರ್ಥ್ಯವನ್ನು ಸಾಭೀತು ಪಡಿಸಿದ್ದಾರೆ.
ಗೇಲ್ ಆಟಕ್ಕೆ ಎಲ್ಲಾ ಎದುರಾಳಿ ತಂಡದ ಬೌಲರ್ ಗಳು ಬೆಚ್ಚಿ ಬಿದ್ದಿದ್ದಾರೆ. ಆದರೆ, ಇಲ್ಲೊಬ್ಬ ಬೌಲರ್ ಗೆ ಗೇಲ್ ಕಂಡ್ರೆ ಭಯವಿಲ್ಲ. ಗೇಲ್ ಅವರಿಗೆ ಆರಾಮಾಗಿ ಬೌಲಿಂಗ್ ಮಾಡ್ತೀನಿ ಅನ್ನೋ ಕಾನ್ಫಿಡೆನ್ಸ್ ಇರುವ ಈ ಯುವ ಬೌಲರ್ ಗೆ ಟೀಂ ಇಂಡಿಯಾ ಹಾಗೂ ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿಗೆ ಬೌಲ್ ಮಾಡೋದೆಂದ್ರೆ ಭಯವಂತೆ.
ಹೌದು , ವಿರಾಟ್ ಗೆ ಬೌಲ್ ಮಾಡೋದು ಭಯ ಅಂತ ಹೇಳಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಸ್ಪಿನ್ನರ್ ಕುಲದೀಪ್ ಯಾದವ್.
ಕ್ರೀಸ್ ಗೇಲ್ ಕೊಹ್ಲಿ ಅಷ್ಟು ತೊಂದರೆ ಕೊಡಲ್ಲ. ರನ್ ಮಷಿನ್ ಎಂದು ಕರೆಸಿಕೊಂಡಿರೋ ಕೊಹ್ಲಿ ಅದಕ್ಕೆ ತಕ್ಕಂತೆ ಆಟ ಆಡುತ್ತಾರೆ. ಸಿಕ್ಸರ್ , ಬೌಂಡರಿ ಸಾಧ್ಯವಿಲ್ಲದ ಎಸೆತಗಳಲ್ಲಿ ಒಂದು ಅಥವಾ ಎರಡು ರನ್ ಕದಿಯುವ ಮೂಲ ಪ್ರತಿ ಎಸೆತದಲ್ಲೂ ರನ್ ಗಳಿಕೆಗೆ ಒತ್ತು ನೀಡುತ್ತಾರೆ. ಇವರಿಗೆ ಬೌಲಿಂಗ್ ಮಾಡೋದು ನಿಜಕ್ಕೂ ಸವಾಲು ಎಂದಿದ್ದಾರೆ ಕುಲದೀಪ್ ಯಾದವ್.