ಸೋಮವಾರ ನಿಗಧಿಯಾಗಿದ್ದ ಎಚ್ ಡಿ ಕುಮಾರ ಸ್ವಾಮಿಯವರ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಎರಡು ಕಾರಣಗಳಿಂದ ಬುಧವಾರಕ್ಕೆ ಮುಂದೂಡಲ್ಪಟ್ಟಿದೆ.
ಸೋಮವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಇರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಮೈತ್ರಿ ಧರ್ಮಪಾಲಿಸಿ ಕಾರ್ಯಕ್ರಮ ಮುಂದೂಡಿದ್ದಾರೆ. ಮಂಗಳವಾರ ಶುಭದಾಯಕವಲ್ಲ ಎಂದು ಬುಧವಾರಕ್ಕೆ ಕಾರ್ಯಕ್ರಮ ಮುಂದೂಡಲಾಗಿದೆ.
ಬುಧವಾರ ಮಧ್ಯಾಹ್ನ 12 ರಿಂದ 1 ಗಂಟೆ ಒಳಗಾಗಿ ಎಚ್ ಡಿಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವವರು. ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದೆ. ಲಕ್ಷಾಂತರ ಮಂದಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಕಾಂಗ್ರೆಸ್ ಗೆ 20 ಹಾಗೂ ಜೆಡಿಎಸ್ ಗೆ 12 ಸಚಿವ ಸ್ಥಾನ ಸಿಗಲಿದೆ.