ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ತಮ್ಮ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಿಎಸ್ ಕೆಯ ಗೇಮ್ ಚೇಂಜರ್ ಮಾಹಿಯನ್ನು ಅಭಿಮಾನಿಗಳು ಪ್ರೀತಿಯಿಂದ ತಲಾ ಎಂದು ಕರೆಯುತ್ತಾರೆ.
ತಮಿಳು ಚಿತ್ರರಂಗದಲ್ಲಿ ಅಜಿತ್ ಅವರನ್ನು ತಲಾ ಎಂದು ಕರೆಯುತ್ತಾರೆ. ಅದೇರೀತಿ ಕ್ರಿಕೆಟ್ ನಲ್ಲಿ ಧೋನಿ ತಲಾ ಎಂದು ಕರೆಸಿಕೊಳ್ಳುತ್ತಿದ್ದಾರೆ.
ಆದರೆ, ಒಂದು ಕಾಲದಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿದ್ದ, ಸ್ಪಾಟ್ ಫಿಕ್ಸಿಂಗ್ ನಲ್ಲಿ ಸಿಕ್ಕಿಬಿದ್ದಿದ್ದ ಶ್ರೀಶಾಂತ್ ಪ್ರಕಾರ ಧೋನಿಯನ್ನು ತಲಾ ಎಂದು ಕರೆಯೋದು ಸಮಂಜಸವಲ್ಲವಂತೆ. ತಲಾ ಅನ್ನೋ ಪದ ಸೆಟ್ ಆಗೋದು ಅಜಿತ್ ಗೆ ಮಾತ್ರ. ಧೋನಿಯನ್ನು ತಲಾ ಎಂದು ಕರೆಯಬೇಡಿ ಎಂದಿದ್ದಾರೆ.
ನನ್ನ ಪ್ರಕಾರ ಇರೋದು ಒಬ್ಬರೇ ತಲಾ. ಅದು ಅಜಿತ್. ಅದು ಅವರಿಗೆ ಹೇಳಿಮಾಡಿಸಿದ ಹೆಸರು. ಆದರೆ, ಧೋನಿಗಲ್ಲ ಎಂದಿದ್ದಾರೆ. ನಾನು ಎಷ್ಟೊಂದು ಕಡೆ ನೋಡಿದೆ. ಎಲ್ಲಿ ನೋಡಿದ್ರು ಧೋನಿ ತಲಾ ಹಾಕಿದ್ದಾರೆ..! ಏನಾಗಿದೆ ಇವರಿಗೆ …ತಲಾ ಅಂದ್ರೆ ಅವರೊಬ್ಬರೇ . ಅದು ಅಜಿತ್ ಮಾತ್ರ ಎಂದು ಶ್ರೀಶಾಂತ್ ಹೇಳಿದ್ದಾರೆ.
ನನಗೆ ಧೋನಿ ಬಗ್ಗೆ ಅಪಾರ ಗೌರವವಿದೆ. ಅವರ ನಾಯಕತ್ವದಲ್ಲಿ ಆಡುವ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆಯಿದೆ. ಆದರೆ ತಲಾ ಪದಕ್ಕೆ ಅಜಿತ್ ಮಾತ್ರ ಸೂಕ್ತ ಎಂದು ಅವರು ತನ್ನ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ.