ಕರಾವಳಿ ಭಾಗದಲ್ಲಿ ಕೊರಗಜ್ಜನ ಮೇಲೆ ಅಪಾರ ನಂಬಿಕೆ ಇದೆ.ಕೊರಗಜ್ಜ ನಂಬಿದವರ ಕೈ ಬಿಡುವುದಿಲ್ಲ ಎಂಬ ಭಕ್ತಿ-ಭಾವ ಭಕ್ತರಲ್ಲಿದೆ.
ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಕಂಡುಬಂದಿದೆ.
ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಈ ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದ ಅನ್ಯಕೋಮಿನ ಯುವಕರ ಗುಂಪಿಗೆ ಸಮಸ್ಯೆ ತಟ್ಟಿದೆ. ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಯುವಕರ ಗುಂಪು ಮೂತ್ರ ವಿಸರ್ಜನೆ ಮಾಡಿತ್ತು.
ಅಷ್ಟೇ ಅಲ್ಲದೇ ಅದೇ ಹುಂಡಿಗೆ ಕಾಂಡೋಮ್ ಪ್ಯಾಕೇಟ್ ಗಳನ್ನು ಹಾಕಿದ್ದರು. ದೈವ ಏನು ಮಾಡುತ್ತೆ ಅನ್ನೋ ಉಡಾಫೆ ಮಾತನಾಡುತ್ತಾ, ಆ ಹುಡುಗರು ಅಲ್ಲಿಂದ ತೆರಳಿದ್ದರು. ಆದರೆ ನಂಬಿಕೆಯ ದೈವ ಕೊರಗಜ್ಜ ತನ್ನ ಶಕ್ತಿ ತೋರಿಸಿದ್ದಾನೆ. ಈ ಅನಾಗರಿಕ ವರ್ತನೆ ತೋರಿದ ಕೆಲವೇ ದಿನಗಳಲ್ಲಿ ತಂಡದಲ್ಲಿದ್ದ ಅಪ್ರಾಪ್ತ ಬಾಲಕನಿಗೆ ಅನಾರೋಗ್ಯ ಬಾಧಿಸಿದೆ. ಸೊಂಟದ ಕೆಳಗೆ, ಎರಡೂ ಕಾಲಿನ ಭಾಗ ಬಲ ಕಳೆದುಕೊಂಡಿದೆ.
ಈ ಬಗ್ಗೆ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಿಲ್ಲ. ಅನ್ಯ ಕೋಮಿನವರಾದರೂ ಹಿಂದೂಗಳೊಂದಿಗೆ ಉತ್ತಮ ಒಡನಾಟವಿದ್ದ ಸಂತ್ರಸ್ಥ ಕುಟುಂಬ ಜ್ಯೋತಿಷಿಯ ಮೊರೆ ಹೋಗಿದ್ದಾರೆ. ಆಗ ಕೊರಗಜ್ಜನಿಗೆ ಮಾಡಿದ ಅಪಚಾರದ ಪ್ರಸ್ತಾಪವಾಗುತ್ತೆ. ಜ್ಯೋತಿಷಿಯ ಸೂಚನೆಯಂತೆ ತಕ್ಷಣವೇ ಕಟಪಾಡಿಯ ಕೊರಗಜ್ಜ ಸ್ಥಾನಕ್ಕೆ ಬಂದು ನೊಂದ ಕುಟುಂಬ ವಿಷಯ ತಿಳಿಸುತ್ತಾರೆ. ಈ ನಡುವೆ ಕಾಣಿಕೆ ಡಬ್ಬಿ ತೆರೆದು ನೋಡಿದ ಕ್ಷೇತ್ರದ ಆಡಳಿತ ಮಂಡಳಿಗೂ ಕಿಡಿಗೇಡಿಗಳ ಕೃತ್ಯ ಅರಿವಿಗೆ ಬಂದಿದೆ.
ತಮ್ಮದು ತಪ್ಪಾಗಿದೆ ಎಂದು ಕುಟುಂಬದ ಕೇಳಿಕೊಂಡು ಕೋರಿಕೆಯಂತೆ ಕೊರಗಜ್ಜ ದೈವದ ದರ್ಶನ ಏರ್ಪಾಟು ಮಾಡಲಾಗಿದೆ. ದರ್ಶನದ ವೇಳೆ ಅಪಚಾರ ಮಾಡಿದ ಅಪ್ರಾಪ್ತ ಬಾಲಕ ದೈವದ ಕ್ಷಮೆ ಕೊರಿದ್ದಾನೆ. ಇಂತಹಾ ಕೃತ್ಯ ಮಾಡಕೂಡದು ಎಂದು ದೈವ ಎಚ್ಚರಿಸಿದೆ. ಈ ಘಟನೆ ಕರಾವಳಿಯಾದ್ಯಂತ ಕುತೂಹಲ ಕೆರಳಿಸಿದೆ. ಈಗ ಕೊರಗಜ್ಜನ ದರ್ಶನದ ವೀಡಿಯೋ, ಪೋಟೋಗಳು ವೈರಲ್ ಆಗಿದೆ.