ಕ್ಷಮಿಸಿ ಅಪ್ಪಾ ಎಂದು ಬರೆದಿಟ್ಟು ಇಬ್ಬರು ಯುವತಿಯರು ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ ಘಟನೆ ಆಗ್ನೇಯ ದೆಹಲಿಯ ತುಘಲಕಾಬಾದ್ ನಲ್ಲಿ ನಡೆದಿದೆ.
ಈ ಘಟನೆ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ. ಇಬ್ಬರು ಯುವತಿಯರು ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ರೀತಿಯಲ್ಲಿ ಬಿದ್ದಿದ್ದರು. ಇವರನ್ನು ಗಮನಿಸಿದವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೋಗುವಾಗ ಮಾರ್ಗಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಯವತಿಯರು ‘Sorry Father’ ಎಂದು ಬರೆದಿದ್ದ ಚೀಟಿಯೊಂದು ದೊರೆತಿದೆ.
ಮೃತರಲ್ಲಿ ಒಬ್ಬಾಕೆಯ ತಾಯಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು.ಇದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಶಂಕಿಸಿದ್ದಾರೆ. ಇನ್ನೂಬ್ಬಳ ಆತ್ಮಹತ್ಯೆಗೆ ಶಂಕಿತ ಕಾರಣ ಕೂಡ ತಿಳಿದುಬಂದಿಲ್ಲ. ಇಬ್ಬರೂ 12 ನೇ ತರಗತಿ ಓದ್ತಿದ್ದರು.ಇತ್ತೀಚೆಗೆ ಪ್ರಕಟವಾದ ಸಿಬಿಎಸ್ ಸಿ ಫಲಿತಾಂಶದ ಕಾರಣದಿಂದ ಇವರು ಆತ್ಮಹತ್ಯೆ ಮಾಡಿಕೊಂಡರೇ? ಎಂಬ ಸಂಶಯ ಕೂಡ ಮನೆಮಾಡಿದ್ದು, ತನಿಖೆಯಿಂದ ಬದಲಾಗಬೇಕಿದೆ.