ನಿಮಗೆ ನೆನಪಿದ್ಯಾ? 1999ರಲ್ಲಿ ತೆರೆಕಂಡ ‘ಹಮ್ ದಿಲ್ ದೆ ಚುಕೆ ಸನಮ್’. ಈ ಸಿನಿಮಾದಲ್ಲಿ ನಾಯಕಿ ಐಶ್ವರ್ಯ ರೈ ನಾಯಕ ಸಲ್ಮಾನ್ ಖಾನ್ ಪ್ರೀತಿಸ್ತಿರ್ತಾರೆ. ಆದರೆ ಐಶ್ವರ್ಯ ಮನೆಯವರು ಆಕೆಗೆ ಅಜಯ್ ದೇವಗನ್ ಜೊತೆ ಮದುವೆ ಮಾಡ್ತಾರೆ. ಒಂದು ದಿನ ಅಜಯ್ ದೇವಗನ್ ಗೆ ತನ್ನ ಪತ್ನಿ ಐಶ್ವರ್ಯ ರೈ ಸಲ್ಮಾನ್ ಖಾನ್ ನನ್ನು ಪ್ರೀತಿಸ್ತಿರೋ ವಿಷಯ ಗೊತ್ತಾಗುತ್ತೆ. ನಂತರ ಅಜಯ್ ತನ್ನ ಮಡದಿ ಮೆಚ್ಚಿದವನನ್ನು ಹುಡುಕಿ ಮದುವೆ ಮಾಡಿಸಲು ಮುಂದಾಗ್ತಾನೆ. ಕೊನಗೆ ನಾಯಕಿ ಪತಿಯ ಜೊತೆಗಿರಲು ಡಿಸೈಡ್ ಮಾಡಿ ಬಿಡ್ತಾಳೆ.
ಆದರೆ, ಇಲ್ಲೊಂದು ಸ್ಟೋರಿ ಇದೆ. ಈ ಸ್ಟೋರಿ ಯಲ್ಲಿ ಸ್ವಲ್ಪವೇ ಸ್ವಲ್ಪ ವ್ಯತ್ಯಾಸವೆಂದ್ರೆ ಪತಿ ಮಡದಿಗೆ ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿಯೇ ಬಿಡ್ತಾನೆ…!
ಇದು ಬರಲಿರುವ ಹೊಸ ಸಿನಿಮಾ ಕಥೆಯಲ್ಲ …! ಇದೊಂದು ರಿಯಲ್ ಸ್ಟೋರಿ.
ಉತ್ತರ ಪ್ರದೇಶದ ಸನಿಗ್ವನ್ ನಲ್ಲಿ ನಡೆದ ನೈಜಕಥೆ. ಸುಜಿತ್ ಎನ್ನುವ ಯುವಕ ಶಾಂತಿ ಎಂಬ ಯುವತಿಯನ್ನು ಕಳೆದ ಫೆಬ್ರವರಿ 19 ರಂದು ಮದುವೆ ಆಗಿದ್ದ.
ಸುಜಿತ್ ಏನೋ ಶಾಂತಿಯನ್ನು ಪ್ರೀತಿಯಿಂದಲೇ ಮದ್ವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ, ಶಾಂತಿ ಮಾತ್ರ ಪ್ರಿಯತಮನ ಕೊರಗಿನಲ್ಲೇ ಇದ್ದಳು. ಒಲ್ಲದ ಮನಸ್ಸಿನಿಂದ ಗಂಡನ ಜೊತೆ ಸಂಸಾರ ಮಾಡ್ತಿದ್ದಳು.
ವಿಷಯ ತಿಳಿದ ಬೇರೆ ಯಾರಾದ್ರು ಆಗಿದ್ರೆ ಕೋಪಿಸಿಕೊಂಡು , ಜಗಳವಾಡ್ತಿದ್ರು. ಅತಿರೇಕ ಎನಿಸಿದ್ರೆ ವಿಚ್ಛೇದನ ನೀಡಿ ನಿನ್ನ ಸಹವಾಸವೇ ಸಾಕು ಎಂದು ಕೈ ಮುಗಿಯುತಿದ್ರು. ಆದ್ರೆ ಸುಜಿತ್ ಹಾಗೆ ಮಾಡದೇ ಹೆಂಡತಿಯನ್ನು ಜೊತೆಯಲ್ಲೇ ಇರಿಸಿಕೊಂಡು ಲಖನೌದ ಹುಡುಗ ರವಿ ಜೊತೆ ಮದ್ವೆ ಮಾಡಿಸಿದ್ದಾನೆ…!