ತಮ್ಮ ಕ್ಷೇತ್ರದ ವ್ಯಕ್ತಿಯ ಶವ ಹೊತ್ತು ಶವ ಸಂಸ್ಕಾರ ಮಾಡಿಕೊಡುವ ಮೂಲಕ ಕಾಂಗ್ರೆಸ್ ಶಾಸಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಅಸ್ಸಾಂ ನ ಜೋಹ್ರತಾ ಜಿಲ್ಲೆಯ ಮರಿಯಾನಿ ವಿಧಾನಸಭಾ ಕ್ಷೇತ್ರದ ಶಾಸಕ ರೂಪ್ ಜ್ಯೋತಿ ಕರ್ಮಿ ಮಾನವೀಯತೆ ಮೆರೆದವರು. ದಿಲೀಪ್ ದವೆ ಎಂಬುವವರು ಸಾವನ್ನಪ್ಪಿದ್ದು, ಇವರಿಗಿದ್ದುದು ಒಬ್ಬರೇ ಒಬ್ಬ ಅಂಗವಿಕಲ ಸಂಬಂಧಿ ಮಾತ್ರ. ಸ್ಥಳೀಯರು ಸಹ ಸಂಸ್ಕಾರಕ್ಕೆ ಕೈ ಜೋಡಿಸಿರಲಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೂಪ್ ಜ್ಯೋತಿ ಕುರ್ಮಿ , ಚಿತೆ ಸಿದ್ಧಪಡಿಸಲು ನೆರವಾಗಿದ್ದಲ್ಲದೆ ಅಂತ್ಯಸಂಸ್ಕಾರದಲ್ಲೂ ಭಾಗಿಯಾದ್ರು. ಬಳಿಕ ಶಾಸಕರು ಆಟೋ ಚಾಲಕರೊಬ್ಬರ ತಾಯಿಯ ಶವ ಸಂಸ್ಕಾರದಲ್ಲೂ ಭಾಗಿಯಾದ್ರು.