ಅಕ್ರಮ ಮರಳು ಗಣಿಗಾರಿಕೆ ಪ್ರಶ್ನಿಸಲು ಹೋದ ಪಿಎಸ್ ಐ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭೀಮಾತೀರದ ಗಡಿ ಗ್ರಾಮದ ದಸೂರಿ ಸಮೀಪ ನಡೆದಿದೆ.
ಇಂದು ಬೆಳಗಿನ ಜಾವ 2ರಿಂದ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಗಡಿ ಗ್ರಾಮದ ಅಕ್ರಮ ಮರಳು ದಂಧೆಕೋರರಿಂದ ಕೃತ್ಯ ನಡೆದಿದೆ.
ಅಕ್ರಮವನ್ನು ಮೊದಲು ದಸೂರು ಗ್ರಾಮಸ್ಥರು ತಡೆಯಲು ಹೋದಾಗ ಅವರ ಮೇಲೆ ದಂಧೆಕೋರರು ಹಲ್ಲೆಗೆ ಮುಂದಾಗಿದ್ದರು.
ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಚೆಡಚಣ ಪಿಎಸ್ ಐ ಗೋಪಾಲ ಹಳ್ಳುರಗೆ ಸ್ಥಳಕ್ಕೆ ಬಂದು ಪ್ರಶ್ನಿಸಿದ್ದಾರೆ. ಆಗ ದಂಧೆಕೋರರು ಅವರ ಮೇಲೂ ಕಲ್ಲುತೂರಟ ನಡೆಸಿ ಕಾಲ್ಕೀಳುವಂತೆ ಮಾಡಿದ್ದಾರೆ. ಘಟನೆಯಲ್ಲಿ ಗೋಪಾಲ್ ಅವರಿಗೆ ಗಾಯಗಳಾಗಿದ್ದು, ಬೈಕ್ ಜಖಂಗೊಂಡಿದೆ.