ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಯಾಣಿಸುತ್ತಿದ್ದ ವಿಮಾನ 14 ನಿಮಿಷಗಳ ಕಾಲ ರಾಡರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಸುಷ್ಮಾ ಸ್ವರಾಜ್ ಶನಿವಾರ ಮಧ್ಯಾಹ್ನ 2.8 ಕ್ಕೆ ಭಾರತೀಯ ವಾಯುಪಡೆಯ ಎಂಬ್ರೆಯರ್ 135 ವಿಮಾನದಲ್ಲಿ ತಿರುವನಂತಪುರದಿಂದ ಪ್ರಯಾಣ ಬೆಳೆಸಿದ್ದರು.
ವಿಮಾನ ಸಂಜೆ 4.44 ಕ್ಕೆ ಮಾಲೆಯ ಎಟಿಸಿ (ವಿಮಾನ ಸಂಚಾರ ನಿಯಂತ್ರಣ)ಯೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ನಂತರ ಮಾಲೆ ಎಟಿಸಿಯನ್ನು ಮಾರಿಷಸ್ ಗೆ ವರ್ಗಾಯಿಸಿತ್ತು.
ಮಾಲೆಯಿಂದ ಮಾರಿಷಸ್ ಗೆ ಎಟಿಸಿ ವರ್ಗಾಯಿಸುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. 14 ನಿಮಿಷಗಳ ಬಳಿಕ ವಿಮಾನ ಮಾರಿಷಸ್ ಎಟಿಸಿಯೊಂದಿಗೆ ಸಂಪರ್ಕ ಸಾಧಿಸಿದೆ ಎಂದು ತಿಳಿದುಬಂದಿದೆ.