ಎಲ್ಲರೆದುರು ಮುತ್ತು ಕೊಡೋಕೆ ಹಿಂದೆ ಮುಂದೆ ಯೋಚಿಸ್ತೀವಿ. ಆದರೆ, ಇಲ್ಲೊಂದು ಜೋಡಿ ರಸ್ತೆ ಬದಿಯಲ್ಲೇ ಕಾಮಕೇಳಿ ನಡೆಸಿ ಸುದ್ದಿಯಲ್ಲಿದೆ.
ಇದು ನಡೆದಿರೋದು ಮುಂಬೈನ ಕ್ವೀನ್ಸ್ ನೆಕ್ಲೆಸ್ ರಸ್ತೆಯಲ್ಲಿ. ರಸ್ತೆಯ ಡಿವೈಡರ್ ಮೇಲೆ ಜೋಡಿಯೊಂದು ಯಾರನ್ನೂ ಲೆಕ್ಕಿಸಿದೆ ಸೆಕ್ಸ್ ನಲ್ಲಿ ತೊಡಗಿದ್ದರು. ಇದನ್ನು ಜನ ಮೊಬೈಲ್ ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಎಚ್ಚೆತ್ತ ಜೋಡಿ ಬಟ್ಟೆ ಸರಿಪಡಿಸಿಕೊಂಡು ಅಲ್ಲಿಂದ ಕಾಲ್ಕಿಳಲು ಯತ್ನಿಸಿದೆ. ಕಾಮಕೇಳಿಯಲ್ಲಿ ತೊಡಗಿದ್ದ ಗೋವಾದ ಯುವತಿ ಸಿಕ್ಕಿಬಿದ್ದಿದ್ದು, ಆಕೆಯೊಡನೆ ಇದ್ದ ವಿದೇಶಿಗ ಎಸ್ಕೇಪ್ ಆಗಿದ್ದಾನೆ. ಆತನಿಗೆ ಹುಡುಕಾಟ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಅನ್ವಯ ಯುವತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆ ಎನ್ನಲಾಗಿದೆ.