ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್ ನ ಕನಸು.
ಅದರಲ್ಲೂ ಅವರನ್ನು ಡಕ್ ಔಟ್ ಮಾಡಿದ್ರೆ ಆ ಬೌಲರ್ ನ ಖುಷಿಗೆ ಪಾರವೇ ಇರುತ್ತಿರಲಿಲ್ಲ.
ಸಚಿನ್ ರಣಜಿಯಲ್ಲಿ ಡಕೌಟ್ ಆಗಿದ್ದು ಒಂದೇ ಒಂದು ಬಾರಿ. ಸಚಿನ್ ಅವರನ್ನು ಚೊಚ್ಚಲ ಡಕ್ ಔಟ್ ಮಾಡಿದ್ದು ಟೀಂ ಇಂಡಿಯಾದ ವೇಗಿ ಭುವನೇಶ್ವರ್ ಕುಮಾರ್.
ಗೌರವ್ ಕಪೂರ್ ಅವರು ನಡೆಸಿಕೊಡುವ ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಭುವಿ ಈ ವಿಷಯವನ್ನು ಹೇಳಿದ್ದಾರೆ.
2009ರ ರಣಜಿ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಸಚಿನ್ ಅವರನ್ನು ಡಕ್ ಔಟ್ ಮಾಡಿದ್ದರು. ಅಲ್ಲಿಯವರೆಗೂ ಸಚಿನ್ ಒಂದೇ ಒಂದು ದೇಶಿಯ ಪಂದ್ಯದಲ್ಲಿ ಡಕ್ ಔಟ್ ಆಗಿರ್ಲಿಲ್ಲ.
ಭುವಿ 2012 ರಲ್ಲಿ ಟೀಂ ಇಂಡಿಯಾಕ್ಕೆ ಆಯ್ಕೆಯಾದಾಗ ಸಚಿನ್ ಅವರನ್ನು ಮಾತಾಡಿಸಬೇಕೆಂಬ ಆಸೆ ಇತ್ತು. ಒಂದು ದಿನ ಲಿಫ್ಟ್ ನಲ್ಲಿ ಸಚಿನ್ನೇ ಭುವಿಯನ್ನು ಮಾತಾಡಿಸಿ ವಿಶ್ ಮಾಡಿದ್ದರಂತೆ.