ಭಾರತ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನೀಲ್ ಚೆಟ್ರಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲೀಗ ಅತಿಹೆಚ್ಚು ಗೋಲ್ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ಚೆಟ್ರಿ ಅವರದ್ದಾಗಿದೆ.
ಭಾರತ ಮತ್ತು ಕೀನ್ಯಾ ನಡುವೆ ನಡೆದ ಇಂಟರದ ಕಾಂಟಿನೆಂಟಲ್ ಅಂತರಾಷ್ಟ್ರೀಯ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಸುನೀಲ್ ಚೆಟ್ರಿ ಎರಡು ಗೋಲ್ ಗಳನ್ನು ಬಾರಿಸಿದರು. ಈ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖಪಾತ್ರವಹಿಸುವುದರ ಜೊತೆಗೆ ದಾಖಲೆಯೊಂದನ್ನು ನಿರ್ಮಿಸಿದರು.
ಈ ಗೋಲುಗಳಿಂದ ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಚೆಟ್ರಿ ಬಾರಿಸಿದ ಗೋಲ್ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಅವರ ಗೋಲುಗಳಿಗೆ ಸಮನಾಗಿದೆ. ಸಕ್ರಿಯ ಆಟಗಾರರ ಪೈಕಿ ಅತಿಹೆಚ್ಚು ಗೋಲ್ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ಚೆಟ್ರಿ ಅವರದ್ದಾಗಿದೆ. 150 ಪಂದ್ಯಗಳಿಂದ 81 ಗೋಲ್ ಗಳನ್ನು ಬಾರಿಸಿರುವ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡತ ಮೊದಲ ಸ್ಥಾನದಲ್ಲಿದ್ದಾರೆ. ಸುನಿಲ್ ಚೆಟ್ರಿ 102 ಪಂದ್ಯಗಳಿಂದ 64 ಗೋಲ್ ಗಳನ್ನು ಬಾರಿಸಿದ್ದಾರೆ. ಮೆಸ್ಸಿ 124 ಪಂದ್ಯಗಳಿಂದ ಇಷ್ಟು ಗೋಲ್ ಬಾರಿಸಿದ್ದಾರೆ.