ಕೌಟುಂಬಿಕ ಕಲಹದ ಕಾರಣದಿಂದ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ತೋಟಗಾನಹಳ್ಳಿಯಲ್ಲಿ ಈ ಮನಕಲುಕುವ ಘಟನೆ ನಡೆದಿರೋದು.
ಪಾರ್ವತಮ್ಮ ( 25) , ಚಂದನ (5) , ಅಕ್ಷಯ್ (3) ಮತ್ತು ಜೀವನ್ (7 ) ಮೃತ ದುರ್ದೈವಿಗಳು. ನಿನ್ನೆ ಈ ಘಟನೆ ನಡೆದಿರೋದು.
ಪಾರ್ವತಮ್ಮ ಮತ್ತು ಅಕ್ಷಯ್ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಚಂದನ ಮತ್ತು ಜೀವನ್ ಶವ ಪತ್ತೆಯಾಗಿದೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.