ಎಟಿಎಂನಿಂದ ಹಣ ಡ್ರಾ ಮಾಡಿದಾಗ ಗ್ರಾಹಕರಿಗೆ ಸುಟ್ಟ, ಹರಿದ ,ಮಸಿ ಮೆತ್ತಿದ ನೋಟುಗಳು ಸಿಕ್ಕಿವೆ.
ಬೆಳಗಾವಿಯ ಹುಕ್ಕೇರಿ ತಾಲೂಕಿನ ಕಣಗಲದಲ್ಲಿ ಎಸ್ ಬಿಐ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಸುಟ್ಟ ನೋಟು ಸಿಕ್ಕಿರೋದು.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡಿರೋ ಹಿಂದೂಸ್ತಾನ ಲೇಟೆಕ್ಸ್ ಕಂಪನಿ ನೌಕರ ರಫೀಕ್ ಭಾಗವಾನ , ಕಣಗಲ್ ಗ್ರಾಮದ ಎಟಿಎಂ ನಿಂದ ಹಣ ಡ್ರಾ ಮಾಡಿದಾಗ ಈ ನೋಟುಗಳು ಸಿಕ್ಕಿವೆ.
2 ಸಾವಿರ ರೂ ಮುಖಬೆಲೆಯ 6 ನೋಟುಗಳು ಸುಟ್ಟ, ಹರಿದ , ಮಸಿ ಬಳಿದ ಸ್ಥಿತಿಯಲ್ಲಿವೆ. ಇದರಿಂದ ಕಂಗಾಲಾಗಿರುವ ಗ್ರಾಮಸ್ಥರು ಎಸ್ ಬಿಐ ಶಾಖೆಗೆ ದೂರು ನೀಡಿದ್ದಾರೆ.