ಐಸಿಸಿ ಎಫ್ ಟಿಪಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು 5 ವರ್ಷಗಳಲ್ಲಿ ದಾಖಲೆಯ 203 ಅಂತರಾಷ್ಟ್ರೀಯ ಪಂದ್ಯಗಳನ್ನಾಡಲಿದೆ.
2018-2023 ರ ಅವಧಿಯಲ್ಲಿ ಟೀಂ ಇಂಡಿಯಾ 51 ಟೆಸ್ಟ್, 83 ಏಕದಿನ ಹಾಗೂ 69 ಟಿ20 ಪಂದ್ಯಗಳನ್ನಾಡಲಿದೆ. ಅತಿ ಹೆಚ್ಚು ಪಂದ್ಯಗಳನ್ನಾಡುವ ತಂಡಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದ್ದರೆ ,186 ಪಂದ್ಯಗಳನ್ನಾಡುವ ವೆಸ್ಟ್ ಇಂಡೀಸ್ ಎರಡನೇ ಹಾಗೂ 175 ಪಂದ್ಯಗಳನ್ನಾಡುವ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ.
ಟೆಸ್ಟ್ ಮಾದರಿಯ ಪಂದ್ಯಗಳಲ್ಲಿ ಇಂಗ್ಲೆಂಡ್ 59 ಪಂದ್ಯಗಳನ್ನು ಆಡಲಿದ್ದು, ಆಸ್ಟ್ರೇಲಿಯಾ 47 ಪಂದ್ಯಗಳನ್ನು ಆಡಲಿದೆ. ಇನ್ನು ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕ್ರಮವಾಗಿ 68 ಹಾಗೂ 75 ಪಂದ್ಯವನ್ನು ಆಡಲಿದೆ.