15 ವರ್ಷದ ಹುಡುಗಿ ಮೇಲೆ 10ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ನ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಚೇರಿ ಎಂಬ ಗ್ರಾಮದಲ್ಲಿ ಸೋಮವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿತೀಶ್ (18) ಮತ್ತು ಆತನ ಸಹೋದರ ರೋಹಿತ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಸಂತ್ರಸ್ತೆ ಕುಟುಂಬದವರೊಂದಿಗೆ ನಿಶ್ಚಿತಾರ್ಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಚೇರಿ ಗ್ರಾಮಕ್ಕೆ ಹೋದಾಗ ನಿತೀಶ್ ಮತ್ತು ರೋಹಿತ್ ಆ ಕಾರ್ಯಕ್ರಮಕ್ಕೆ ಕೆಲಸಕ್ಕೆಂದು ಬಂದಿದ್ದರು. ನಿತೀಶ್ ಸಂತ್ರಸ್ತೆಯನ್ನು ಸಮೀಪದ ದೇವಸ್ಥಾನಕ್ಕೆ ಕರೆದಿದ್ದಾನೆ. ಒಪ್ಪಿ ಆಕೆ ದೇವಾಲಯಕ್ಕೆ ಹೋಗಿದ್ದಾಳೆ. ಆ ವೇಳೆ 10 ಮಂದಿ ಕಾಮುಕರ ಗುಂಪು ಈಕೆ ಮೇಲೆ ಅತ್ಯಾಚಾರ ಎಸಗಿದೆ.
ಮಗಳು ಕಾಣುತ್ತಿಲ್ಲ ಎಂದು ಹುಡುಕಾಡಿದ ಪೋಷಕರಿಗೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ನಿತೀಶ್ ಮತ್ತು ರೋಹಿತ್ ನನ್ನು ಬಂಧಿಸಲಾಗಿದೆ.