ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಮನೆಗೆ ಆಗಮಿಸಿ , ಬೆಳಗ್ಗೆ ಸುಮಾರು 6 ಗಂಟೆಯಿಂದ ಸಿಎಂಗಾಗಿ ಕಾಯ್ತಿದ್ದಾರೆ.
ಆಲಘಟ್ಟದಿಂದ ಏಕಾಏಕಿ ಶಾಲೆಯನ್ನು ಭರಮಸಾಗರಕ್ಕೆ ಸ್ಥಳಾಂತಿಸಿರುವುದರಿಂದ 42 ವಿದ್ಯಾರ್ಥಿಗಳು ಶಾಲಾ ಬ್ಯಾಗ್ ಸಮೇತ ಸಿಎಂ ಮನೆಗೆ ಆಗಮಿಸಿದ್ದಾರೆ. ಸ್ಥಳಾಂತರದ ಬಗ್ಗೆ ಮಾಹಿತಿ ನೀಡಿರಲಿಲ್ಲ. ವಿದ್ಯಾರ್ಥಿಗಳನ್ನು ಅಡ್ಮಿಶನ್ ಮಾಡಿದ ಬಳಿಕ ಹೇಳದೆ ಕೇಳದೆ ಸ್ಥಳಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ಇಲ್ಲದ ಕಾರಣ ವಿದ್ಯಾರ್ಥಿಗಳು ಹಳೆಯ ಶಾಲೆಯ ಕಡೆಗೆ ನಿತ್ಯ ಹೋಗಿ ಬರುತ್ತಿದ್ದರು. ಇಂದು ಈ ಸಮಸ್ಯೆಗೆ ಪರಿಹಾರ ನೀಡುವಂತೆ ನೇರವಾಗಿ ಮುಖ್ಯಮಂತ್ರಿಗಳನ್ನೇ ಕೇಳಲು ಬಂದಿದ್ದಾರೆ.