ವಿಳಾಸ ಕೇಳುವ ನೆಪದಲ್ಲಿ ಬಂದ ಯುವತಿಯರು ಯುವಕನ ಪ್ರಜ್ಞೆ ತಪ್ಪಿಸಿ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ರೆಸಿಡೆನ್ಸಿ ರೋಡ್ ನಲ್ಲಿ ನಡೆದಿದೆ.
ಗೌರವ್ ನೇಗಿ ಎಂಬಾತ ಯುವತಿಯರಿಂದ ಸುಲಿಗೆಗೆ ಒಳಗಾದವರು.
ಚುನ್ ಲಂಗ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮುಗಿಸಿ ಬರುತ್ತಿದ್ದ ಯುವಕನನ್ನು ತಡೆದು ಯುವತಿಯರಿಬ್ಬರು ಸ್ವಪ್ನ ಬುಕ್ ಹೌಸ್ ಅಡ್ರೆಸ್ ಕೇಳಿದ್ದಾರೆ. ಆತ ವಿಳಾಸ ಹೇಳುವಾಗ ಮುಖಕ್ಕೆ ಕರ್ಚಿಫ್ ಒತ್ತಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಚಿನ್ನದ ಸರ, ಪರ್ಸ್ ಕಿತ್ಕೊಂಡು ಕಾಲ್ಕಿತ್ತಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.