ಶಾಲಾ ವ್ಯಾನ್ ಡ್ರೈವರ್ ತನ್ನ ಪ್ರಾಣತ್ಯಾಗ ಮಾಡಿ ಮಕ್ಕಳನ್ನು ರಕ್ಷಿಸಿದ ಘಟನೆ ಮಹಾರಾಷ್ಟ್ರದ ವಿರಾರ ನಗರದಲ್ಲಿ ನಡೆದಿದೆ.
ಪ್ರಕಾಶ್ ಪಾಟೀಲ್ (44) ಮಕ್ಕಳ ಜೀವ ಉಳಿಸಿ ಸಾವನ್ನಪ್ಪಿದ ಡ್ರೈವರ್.
ಇವರು ಸೋಮವಾರ ಮಧ್ಯಾಹ್ನ ಶಾಲೆಯಿಂದ ಮಕ್ಕಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ವಾಟರ್ ಲಾಗ್ಡ್ ಪಾಕೆಟ್ಸ್ ಮೂಲಕ ವಾಸೈಗೆ ಹೋಗ್ತಿದ್ರು. ವಿರಾರದಲ್ಲಿನ ನೇರಿಂಗಿ ಗ್ರಾಮದ ಮೂಲಕ ವ್ಯಾನ್ ಚಲಿಸುತ್ತಿತ್ತು. ಅಲ್ಲೇ ಪಕ್ಕದಲ್ಲಿ ತೊರೆ ಹರಿಯುತ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.
ವ್ಯಾನ್ ನಲ್ಲಿ ನಾಲ್ಕು ಮಕ್ಕಳಿದ್ದರು. ಕಹ್ರೋಡಿ ಜಂಕ್ಷನ್ ಹತ್ತಿರ ಬರ್ತಿದ್ದಂತೆ ಮಳೆ ಶುರುವಾಗಿದೆ. ಇದರಿಂದ ಡ್ರೈವರ್ ಗೆ ರಸ್ತೆ ಕಾಣಿಸ್ತಿರ್ಲಿಲ್ಲ. ಸುಮಾರು ಮೂರು ಅಡಿಯಷ್ಟು ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಆದ್ರಿಂದ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಭಾರೀ ಮಳೆಯಿಂದ ಅನಾಹುತ ತಪ್ಪಿದ್ದಲ್ಲ ಎಂದು ತಿಳಿದ ಡ್ರೈವರ್ ಮಕ್ಕಳಲ್ಲಿ ವ್ಯಾನ್ ನಿಂದ ಇಳಿಯುವಂತೆ ಹೇಳಿದ್ದಾರೆ. ತಾನೆ ಸ್ವತಃ ಮಕ್ಕಳನ್ನು ಇಳಿಸಿದ್ದಾರೆ. ಆಗ ಇಬ್ಬರು ಮಕ್ಕಳು ನೀರಿಗೆ ಸಿಲುಕಿದ್ದಾರೆ. ಆಗ ಕೂಡಲೇ ತೊರೆಗೆ ಹಾರಿ ಆ ಇಬ್ಬರು ಮಕ್ಕಳನ್ನು ಚಾಲಕ ರಕ್ಷಿಸಿದ್ದಾರೆ. ಆದ್ರೆ, ಚಾಲಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೇವಲ 20 ನಿಮಿಷದಲ್ಲಿ ಪಾಟೀಲ್ ದೇಹ ಸುಮಾರು 1.5 ಕಿಮೀ ದೂರ ಹೋಗಿದೆ..!