ವೋಲ್ವೋ ಕಂಪೆನಿಗೆ ಸಾರಿಗೆ ಸಚಿವ ಡಿ. ಸಿ ತಮ್ಮಣ್ಣ ಶಾಕ್ ನೀಡಿದ್ದಾರೆ.
ರಾಜ್ಯದ ಎಲ್ಲಾ ಸಾರಿಗೆ ನಿಯಮಗಳಲ್ಲಿನ ಹೊಸ ವೋಲ್ವೋ ಬಸ್ ಖರೀದಿಗೆ ಸಚಿವರು ಬ್ರೇಕ್ ಹಾಕಿದ್ದಾರೆ.
ಐಶಾರಾಮಿ ವೋಲ್ವೋ ಬಸ್ ವ್ಯಾಮೋಹಕ್ಕೆ ಒಳಗಾಗಿದ್ದ ಬಿಎಂಟಿಸಿ, ಕೆಎಸ್ ಆರ್ ಟಿಸಿ, ಎನ್ ಇಕೆಎಸ್ ಆರ್ ಟಿಸಿ, ಎನ್ ಡಬ್ಲ್ಯೂ ಕೆಎಸ್ ಆರ್ ಟಿಸಿ ನಿಗಮಗಳಿಗೀಗ ತಣ್ಣೀರು ಎರಚಿದ್ದಂತಾಗಿದೆ. ಹೊಸ ಬಸ್ ಗಳ ಖರೀದಿಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವರು ನಿರಾಕರಿಸಿದ್ದಾರೆ.
ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಂಡಿದ್ದು , ಮತ್ತೊಮ್ಮೆ ಪ್ರಸ್ತಾವನೆ ತರದಂತೆ ಸೂಚಿಸಿದ್ದಾರೆ.
ವೋಲ್ವೋ ಬಸ್ ನ ನಿರ್ವಹಣೆ ದುಬಾರಿ ,ಮೈಲೇಜ್ ಕಡಿಮೆ ಈಗಾಗಿ ಇವುಗಳ ಖರೀದಿ ನಿಲ್ಲಿಸಿರುವುದಾಗಿ ಸಚಿವರು ತಿಳಿಸಿದ್ದಾರೆ.