ಜೆಡಿಎಸ್ ಗೆ ನಿರೀಕ್ಷಿಸಿದ ಸೀಟ್ ಬಂದಿಲ್ಕ ಎಂದು ಮಾಜಿ ಸಚಿವ ಸಿ. ಚನ್ನಿಗಪ್ಪ ಕಣ್ಣೀರಿಟ್ಟಿದ್ದಾರೆ.
ಜೆಡಿಎಸ್ ತುಮಕೂರು ಜಿಲ್ಲಾಧ್ಯಕ್ಷರಾಗಿರುವ ಇವರು ಜಿಲ್ಲೆಯಲ್ಲಿ ಜೆಡಿಎಸ್ ಸೀಟ್ ಕಡಿಮೆಯಾಗಿದ್ದು, ನಮ್ಮ ಕಳಪೆ ಸಾಧನೆ ಎಂದು ಭಾವುಕರಾದರು.
ನಿನ್ನೆ ನೂತನ ಶಾಸಕ, ಸಚಿವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾವೇಶದಲ್ಲಿ ಭಾವುಕರಾದರು.
ತುಮಕೂರು 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 11ನ್ನೂ ಗೆಲ್ಲುವ ವಿಶ್ವಾಸವಿತ್ತು.ಜೆಡಿಎಸ್ ನ ಭದ್ರಕೋಟೆಯಾದ ಇಲ್ಲಿ ಕೇವಲ 4 ಸ್ಥಾನ ಮಾತ್ರ ಗೆದ್ದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.