ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ 2018-19ನೇ ಸಾಲಿನ ಮುಂಗಡ ಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆ ಆರಂಭವಾಗಿದ್ದು, 2,18, 488 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿನೆಯಾಗುತ್ತಿದೆ.
ರೈತರ ಸಂಪೂರ್ಣ ಸಾಲಮನ್ನಾದ ಬದಲು 2ಲಕ್ಷ ರೂವರೆಗಿನ ಸಾಲ ಮಾತ್ರ ಮನ್ನಾ ಮಾಡಲಾಗಿದ್ದು, ಇದಕ್ಕೆ 34 ಸಾವಿರ ಕೋಟಿ ರೂ ಮೀಸಲಿಡಲಾಗಿದೆ.
ಸಾಲಮನ್ನಾದ ಬಿಸಿ ವಾಹನ ಸವಾರರಿಗೆ ತಟ್ಟಿದೆ…! ಪೆಟ್ರೋಲ್ ಮೇಲಿನ ಸೆಸ್ ಶೇ 30ರಿಂದ 32ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಮೇಲಿನ ದರ 1.14 ರೂ ಏರಿಕೆಯಾಗಿದೆ.
ಡೀಸೆಲ್ ಮೇಲಿನ ಸೆಸ್ ಶೇ 19ರಿಂದ 21ಕ್ಕೆ ಏರಿಕೆಯಾಗಿದ್ದು ಡೀಸೆಲ್ ಬೆಲೆ 1.12ರೂ ಗೆ ಹೆಚ್ಚಳವಾಗಿದೆ.